ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ ಪತ್ನಿ ಲತಾ ರಜಿನಿಕಾಂತ್ಗೆ ಸಂಕಷ್ಟ ಎದುರಾಗಿದೆ. 2014ರಲ್ಲಿ ತೆರೆಕಂಡ ತಮಿಳು ‘ಕೊಚಾಡಿಯನ್’ ವಿವಾದ ಪ್ರಕರಣದಲ್ಲಿ ಲತಾ ವಿರುದ್ಧ ಫೊರ್ಜರಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ವೇಳೆ ಖುದ್ದು ಹಾಜರಾಗಲು ಕೋರ್ಟ್ ಆದೇಶ ಮಾಡಿದೆ.
ಜನವರಿ 6, 2024 ರೊಳಗೆ ಕೋರ್ಟ್ಗೆ ಹಾಜರಾಗಲು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ತಿಳಿಸಿದೆ. ಲತಾ ಅವರ ವಿರುದ್ಧ IPC 463 ಅಡಿ ಕೇಸ್ ದಾಖಲಾಗಿತ್ತು. ಜಾಮೀನು ರಹಿತ ಆಗಿರುವುದರಿಂದ ವಿಚಾರಣೆ ವೇಳೆ ಖುದ್ದು ಹಾಜರಿರಲು ವಕೀಲರು ಮನವಿ ಮಾಡಿಕೊಂಡಿದ್ದರು. ಅಂತೆಯೇ ಕೋರ್ಟ್ ಲತಾ ರಜಿನಿಕಾಂತ್ಗೆ ಹಾಜರಾಗಲು ಸೂಚನೆ ನೀಡಿದೆ.
ರಜಿನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ‘ಕೊಚಾಡಿಯನ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಸಿನಿಮಾ ಸಂಬಂಧ ಎರಡು ಕಂಪನಿಗಳಾದ ಮೆರ್ಸಸ್ ಹಾಗು ಬ್ಯೂರೋ ಅಡ್ವರ್ಟೈಸ್ಮೆಂಟ್ ಪ್ರೈವೆಟ್ ಲಿಮಿಟೆಡ್ ಹಾಗೂ ಒನ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಲಿಮಿಟೆಡ್ ನಡುವೆ ಒಪ್ಪಂದ ಆಗಿತ್ತು.
ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಶ್ಯೂರಿಟಿ ನೀಡಿದ್ದರು. ಆದರೆ ಮೆರ್ಸಸ್ ಅಂಡ್ ಬ್ಯೂರೋ ಅಡ್ವರ್ಟೈಸ್ಮೆಂಟ್ ಪ್ರೈವೆಟ್ ಲಿಮಿಟೆಡ್ಗೆ ಶ್ಯೂರಿಟಿ ನೀಡಿರಲಿಲ್ಲ. ಚಿತ್ರಕ್ಕೆ ನಷ್ಟಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಒಪ್ಪಂದದ ಪ್ರಕಾರ ಪರಿಹಾರ ತುಂಬಿಕೊಡಬೇಕಿತ್ತು. ಆದರೆ ಲತಾ ರಜಿನಿಕಾಂತ್ ಹಾಗೆ ಮಾಡದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಪದೇ ಪದೇ ಸಂಕಷ್ಟ ಎದುರಿಸುತ್ತಿದ್ದಾರೆ.