ಬೆಂಗಳೂರು: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಸಾಮಾನ್ಯ ಜನರನ್ನು ಉದ್ದೇಶಿಸಿ ಆಡಿರುವ ಮಾತುಗಳು ಈಗ ವಿವಾದದ ಕಿಚ್ಚು ಹಚ್ಚಿವೆ.

ಕಾರ್ಯಕ್ರಮವೊಂದರಲ್ಲಿ ಆಸನದ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ಶಾಸಕರಿಗೆ ಒಂದು ಟಿಕೆಟ್ ಕೊಡ್ತಾರೆ, ಅದೂ ಕೆಳಗಿನ ಗ್ಯಾಲರಿಯಲ್ಲಿ. ಎಲ್ಲಿ ಈ ಜನರೆಲ್ಲಾ ಹೋಗ್ತಾರೋ ಅಲ್ಲಿ ನಮಗೆ ಸೀಟು ಕೊಡ್ತಾರೆ” ಎನ್ನುತ್ತಾ ತಮ್ಮ ವಾಕ್ಯವನ್ನು ಪೂರ್ಣಗೊಳಿಸಲು ಹಿಂಜರಿದಿದ್ದಾರೆ.

ಕ್ಯಾಮೆರಾ ಮುಂದಿದೆ ಎಂಬ ಅರಿವಾಗುತ್ತಿದ್ದಂತೆಯೇ ಮಾತು ಬದಲಿಸಲು ಪ್ರಯತ್ನಿಸಿದರೂ, ಅವರ ಆ ‘ಉದ್ಧಟತನದ’ ನಡೆ ಈಗಾಗಲೇ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಜನಪ್ರತಿನಿಧಿಗಳ ಇಂತಹ ‘ವಿಐಪಿ’ ಸಂಸ್ಕೃತಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

View this post on Instagram

A post shared by News Karnataka (@newskarnataka)