ಇರಾನ್‌: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಿಚ್ಚು ಮತ್ತಷ್ಟು ಜೋರಾಗಿದೆ. ಇರಾನ್‌ನ ಸರ್ಕಾರಿ ಮಾಧ್ಯಮ IRIB ವರದಿ ಮಾಡಿರುವಂತೆ, ಇಸ್ರೇಲ್ ಸೇನೆಯನ್ನು ಗುರಿಯಾಗಿಸಿ ಇರಾನ್ ಈಗ 83ನೇ ಹಂತದ ಬೃಹತ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ.

ಈ ದಾಳಿಯ ನಡುವೆ ಒಂದು ಕುತೂಹಲಕಾರಿ ಮತ್ತು ಆಘಾತಕಾರಿ ದೃಶ್ಯ ಕಂಡುಬಂದಿದೆ. ಇರಾನ್ ಉಡಾವಣೆ ಮಾಡಿದ ಕೆಲವು ಕ್ಷಿಪಣಿಗಳ ಮೇಲೆ ಇಂಗ್ಲಿಷ್‌ನಲ್ಲಿ “Thank You” ಎಂದು ಬರೆಯಲಾಗಿದೆ.

ತಮಗೆ ಬೆಂಬಲ ನೀಡುತ್ತಿರುವ ಭಾರತ, ಪಾಕಿಸ್ತಾನ, ಸ್ಪೇನ್ ಮತ್ತು ಜರ್ಮನಿ ಸೇರಿದಂತೆ ವಿವಿಧ ದೇಶಗಳ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸಲು ಇರಾನ್ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಯು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಸಂಚಲನ ಮೂಡಿಸಿದೆ.

View this post on Instagram

A post shared by News Karnataka (@newskarnataka)