News Karnataka Kannada
Wednesday, May 01 2024
ಬೆಂಗಳೂರು

ಇನ್ಮುಂದೆ ಮದುವೆ, ಪ್ರವಾಸಕ್ಕೆ ಸಿಗಲಿದೆ ಬಿಎಂಟಿಸಿ ಬಸ್

ಪ್ರವಾಸ, ಮದುವೆ ಹಾಗೂ ಇತರ ಸಮಾರಂಭಗಳಿಗೆ ಬಿಎಂಟಿಸಿ ಬಸ್‍ಗಳನ್ನು ಬಾಡಿಗೆಗೆ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಂದಾಗಿದೆ. ಉತ್ತಮ ದರಗಳೊಂದಿಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಾಡಿಗೆಗೆ ನೀಡಲು ನಿರ್ಧರಿಸಲಾಗಿದೆ.
Photo Credit : News Kannada

ಬೆಂಗಳೂರು: ಪ್ರವಾಸ, ಮದುವೆ ಹಾಗೂ ಇತರ ಸಮಾರಂಭಗಳಿಗೆ ಬಿಎಂಟಿಸಿ ಬಸ್‍ಗಳನ್ನು ಬಾಡಿಗೆಗೆ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಂದಾಗಿದೆ. ಉತ್ತಮ ದರಗಳೊಂದಿಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಾಡಿಗೆಗೆ ನೀಡಲು ನಿರ್ಧರಿಸಲಾಗಿದೆ.

ಬಿಎಂಟಿಸಿಯ ವಿವಿಧ ಮಾದರಿಯ ಬಸ್‍ಗಳ ದರಗಳ ಪಟ್ಟಿ ಈ ಕೆಳಗಿನಂತಿದೆ:

ಸಾಮಾನ್ಯ ಬಸ್, 40 ಆಸನಗಳಿಗೆ, 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀವರೆಗೆ, ಪ್ರತಿ ಕಿ.ಮೀಗೆ 50 ರೂ.ನಂತೆ 7,500 ರೂ. ನಿಗದಿಪಡಿಸಲಾಗಿದೆ. 12 ಗಂಟೆ ಅವಧಿಗೆ, ಕನಿಷ್ಠ 200 ಕಿ.ಮೀ, ಪ್ರತಿ ಕಿ.ಮೀ ದರ 48 ರೂ.ನಂತೆ 9,600 ರೂ. ನಿಗದಿಪಡಿಸಲಾಗಿದೆ. 24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀ, ಪ್ರತಿ ಕಿ.ಮೀ ದರ 44 ರೂ.ನಂತೆ 11,000 ರೂ. ನಿಗದಿಪಡಿಸಲಾಗಿದೆ. 24 ಗಂಟೆ ಅವಧಿಗೆ  ಕನಿಷ್ಠ 300 ಕಿ.ಮೀ ವರೆಗೆ, ಪ್ರತಿ ಕಿ.ಮೀಗೆ ದರ 44 ರೂ.ನಂತೆ 13,200 ರೂ. ಗೊತ್ತುಪಡಿಸಲಾಗಿದೆ.

ಮಿನಿ ಬಸ್, 31 ಆಸನಗಳಿಗೆ, 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀವರೆಗೆ ಪ್ರತಿ ಕಿ.ಮೀಗೆ 47 ರೂ.ನಂತೆ 7,050 ರೂ. ನಿಗದಿಪಡಿಸಲಾಗಿದೆ. 12 ಗಂಟೆ ಅವಧಿಗೆ (ಕನಿಷ್ಠ 200 ಕಿ.ಮೀಗೆ) ಪ್ರತಿ ಕಿ.ಮೀಗೆ 45 ರೂ.ನಂತೆ 9,000 ರೂ. ನಿಗದಿಪಡಿಸಲಾಗಿದೆ. 24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀಗೆ, ಪ್ರತಿ ಕಿ.ಮೀ ದರ 42 ರೂಪಾಯಿಯಂತೆ 10,500, 24 ಗಂಟೆ ಅವಧಿಗೆ (ನಗರದ ಹೊರಗೆ) ಕನಿಷ್ಠ 300 ಕಿ.ಮೀ ವರೆಗೆ ಪ್ರತಿ ಕಿ.ಮೀ 42 ರೂ.ನಂತೆ 12,600 ರೂ. ನಿಗದಿ ಮಾಡಲಾಗಿದೆ.

ಬಿ.ಎಸ್- 6 ಬಸ್ 41 ಆಸನಗಳಿಗೆ 8 ಗಂಟೆ ಅವಧಿಗೆ ಕನಿಷ್ಠ 150 ಕಿ.ಮೀವರೆಗೆ, ಪ್ರತಿ ಕಿ.ಮೀಗೆ 60 ರೂ.ನಂತೆ 9,000 ರೂ. ಹಾಗೂ 12 ಗಂಟೆ ಅವಧಿಗೆ, ಕನಿಷ್ಠ 200 ಕಿ.ಮೀಗೆ ಪ್ರತಿ ಕಿ.ಮೀಗೆ 55 ರೂ.ನಂತೆ 11,000 ರೂ. ನಿಗದಿಪಡಿಸಲಾಗಿದೆ. 24 ಗಂಟೆ ಅವಧಿಗೆ ಕನಿಷ್ಠ 250 ಕಿ.ಮೀಗೆ ಪ್ರತಿ ಕಿ.ಮೀಗೆ 50 ರೂ.ನಂತೆ 12,500, 24 ಗಂಟೆ ಅವಧಿಗೆ (ನಗರದ ಹೊರಗೆ) ಕನಿಷ್ಠ 300 ಕಿ.ಮೀಗೆ ಪ್ರತಿ ಕಿ.ಮೀ ದರ 50 ರೂ.ನಂತೆ 15,000 ರೂ. ಗೊತ್ತುಪಡಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು