News Karnataka Kannada
Monday, April 29 2024
ಬೆಂಗಳೂರು

ಆನ್‌ಲೈನ್‌ಲ್ಲೂ ಸಿಗಲಿದೆ ಭಾರತ್ ಬ್ರ್ಯಾಂಡ್‌ ಅಕ್ಕಿ, ಬೇಳೆ ಕಾಳು

Bharat brand rice, pulses to be available online
Photo Credit : News Kannada

ಬೆಂಗಳೂರು: ಹಣದುಬ್ಬರಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಾನಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಸರ್ಕಾರ ಈಗಾಗಲೇ ಭಾರತ್ ಬ್ರ್ಯಾಂಡ್‌ ಅಡಿಯಲ್ಲಿ ಗೋಧಿ ಮತ್ತು ಬೇಳೆ ಕಾಳುಗಳನ್ನು ಮಾರಾಟ ಮಾಡುತ್ತಿದೆ. ಭಾರತ್ ಬ್ರ್ಯಾಂಡ್‌‌  ಅಕ್ಕಿ ಗ್ರಾಹಕರಿಗೆ ಆನ್‌ಲೈನ್‌ಲೂ ಸಹ ಸಿಗಲ್ಲಿದ್ದು, ನಗರದಲ್ಲಿಯೂ ಅಕ್ಕಿ ಸಿಗಲಿದೆ.

ಪ್ರಮುಕವಾಗಿ ಭಾರತ್ ಬ್ರಾಂಡ್‌ನ ಅಕ್ಕಿ ಅಮೇಜಾನ್, ಫ್ಲಿಪ್ ಕಾರ್ಟ್ ನಂತಹ ಆನ್‌ಲೈನ್ ಶಾಪಿಂಗ್ ಆಪ್ಲಿಕೇಶನಲ್ಲೂ ಸಹ ಖರೀದಿಸಬಹುದು. ಇದರಿಂದ ಜನ ಸಾಮಾನ್ಯರಿಗೆ ಇನಷ್ಟು ಸುಲಭವಾಗಲಿದೆ.

ಈ ಹಿಂದೆ ಕೇಂದ್ರ ಸರ್ಕಾರದಿಂದ ತಂದತಹ ಭಾರತ್ ಅಟ್ಟಾ ಹಾಗೂ ಕಡಲೆ ಬೇಳೆಗೆ ಸಿಲಿಕಾನ್ ಸಿಟಿಯ ಜನರಿಂದ ಭರ್ಜರಿ ಪ್ರಿತಿಕ್ರಿಯೆ ಬಂದಿತ್ತು. ನಗರದಲ್ಲಿ 2,81,572 ಕೆ.ಜಿ ಭಾರತ್ ದಾಲ್ ಮತ್ತು 1,22,190 ಕೆ.ಜಿ ಗೋಧಿ ವ್ಯಾಪಾರವಾಗಿತ್ತು.

ಬೆಂಗಳೂರಿನಲ್ಲಿ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮೂಲಕ ಮಾರಾಟ ಮಾಡಲು ಪ್ಲಾನ್ ಮಾಡಿದೆ. ಈ ಅಕ್ಕಿಯ ವಿತರಣೆ ಮಂಗಳವಾರ (ಫೆ.6) ಆರಂಭವಾಗುವ ಸಾಧ್ಯತೆಯಿದೆ. ಎನ್‌ಸಿಸಿಎಫ್‌ನ ಮುಖ್ಯ ಗೋಡಾನ್ ಯಶವಂತಪುರದಲ್ಲಿದ್ದು ಬೆಂಗಳೂರಿನ 50 ಏರಿಯಾಗಳಿಗೆ ಮೊಬೈಲ್ ವ್ಯಾನ್ ಮೂಲಕ ಮನೆ ಮನೆಗೆ ತಲುಪಿಸುವ ಪ್ಲಾನ್ ಮಾಡಿಕೊಂಡಿದೆ.

ನಗರದ ಯಾವ ಪ್ರಮುಖ ಪ್ರದೇಶಗಳಲ್ಲಿ ಅಕ್ಕಿ ಸಿಗಲ್ಲಿದೆ ಎಂಬುದರ ಪಟ್ಟಿ ಹೀಗಿದೆ. ಬಸವೇಶ್ವರ ನಗರ, ದೀಪಾಂಜಲಿ ನಗರ, ಮಹಾಕ್ಷ್ಮಿ ಲೇಔಟ್, ಗಾಯತ್ರಿ ನಗರ, ನಾಗಸಂದ್ರ, ಅಬ್ಬಿಗೆರೆ, ಚಿಕ್ಕಬಣ್ಣಾವರ, ಥಣಿಸಂದ್ರ, ಹೆಸರಘಟ್ಟ, ಯಲಹಂಕ, ಮಾಗಡಿ ರೋಡ್, ಕೊಡಿಗೆಹಳ್ಳಿ, ಶೇಷಾದ್ರಿಪುರಂ, ಸಂಜಯ್ ನಗರ, ಜಕ್ಕೂರು, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಜೆ.ಸಿ. ನಗರ, ಡೈರಿ ಸರ್ಕಲ್, ಕೊಡಿಗೆಹಳ್ಳಿ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವ್ಯಾನ್ ಮೂಲಕ ಅಕ್ಕಿ ಪೂರೈಸಿ ಮನೆ ಮನೆಗೆ ತಲುಪಿಸಲಾಗುತ್ತೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು