ಬೆಂಗಳೂರು: ಪ್ರಮುಖ ಸ್ಮಾರ್ಟ್ಫೋನ್ ಮತ್ತು ಸ್ಮಾರ್ಟ್ ಟಿವಿ ಬ್ರ್ಯಾಂಡ್ ಶಿಯೋಮಿ ಇಂಡಿಯಾ ಶುಕ್ರವಾರ ಯುನೈಟೆಡ್ ವೇ ಇಂಡಿಯಾದೊಂದಿಗೆ ದೇಶದಲ್ಲಿ ಲಿಂಗತ್ವ ಅಲ್ಪಸಂಖ್ಯಾತ (ಟ್ರಾನ್ಸ್ಜೆಂಡರ್) ಸಮುದಾಯಕ್ಕೆ ಕೌಶಲ್ಯ ತರಬೇತಿ ನೀಡಲು ಯೋಜಿಸಿದೆ.
ದೆಹಲಿ, ಮುಂಬೈ ಮತ್ತು ಬೆಂಗಳೂರಿನಾದ್ಯಂತ 100 ಟ್ರಾನ್ಸ್ಜೆಂಡರ್ ಗಳಿಗೆ ಲ್ಯಾಪ್ಟಾಪ್, ಕಂಪ್ಯೂಟರ್ ಮತ್ತು ಮೊಬೈಲ್ ಹ್ಯಾಂಡ್ಸೆಟ್ ರಿಪೇರಿ ಜ್ಞಾನ ಒದಗಿಸಲು ಚಿಂತಿಸಿದ್ದು, ಈ ಮೂಲಕ ಅವರಿಗೆ ಸುಸ್ಥಿರ ಉದ್ಯೋಗ ಅವಕಾಶ ಒದಗಿಸಲು ಯೋಜನೆ ರೂಪಿಸಿದೆ.
ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವು ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಪ್ರಮುಖ ಮೊಬೈಲ್ ಕಂಪನಿಗಳೊಂದಿಗೆ ಉದ್ಯೋಗಗಳನ್ನು ಪಡೆಯಲು ಸಹಾಯವಾಗಲಿದೆ ಎಂದು ಕಂಪನಿ ಹೇಳಿದೆ.
“ಯುನೈಟೆಡ್ ವೇ ಇಂಡಿಯಾದೊಂದಿಗಿನ ನಮ್ಮ ಸಹಯೋಗವು ತಂತ್ರಜ್ಞಾನದ ಕ್ಷೇತ್ರದಲ್ಲಿ ನಮ್ಮ ಸಾಧನೆಗೆ ಸಾಕ್ಷಿಯಾಗಿದೆ. ಇದು ಹೆಚ್ಚಿನ ಪ್ರಗತಿಗೆ ಸಹಾಯಕ ಎಂದು ಶಿಯೋಮಿ ಇಂಡಿಯಾದ ಅಧ್ಯಕ್ಷ ಮುರಳಿಕೃಷ್ಣನ್ ಬಿ ಹೇಳಿದರು. “ಟ್ರಾನ್ಸ್ಜೆಂಡರ್ ಸಮುದಾಯ ಉನ್ನತಿಗೆ ಅವರಿಗೆ ಸುಸ್ಥಿರ ಭವಿಷ್ಯವನ್ನು ಒದಗಿಸಲು ಕೆಲಸ ಮಾಡಲು ನಾವು ಸಂತೋಷಪಡುತ್ತೇವೆ” ಎಂದು ಅವರು ಹೇಳಿದರು. ಆಯ್ದ ವ್ಯಕ್ತಿಗಳ ತರಬೇತಿ ನಾಲ್ಕು ತಿಂಗಳುಗಳ ಅವಧಿ ಹೊಂದಿದೆ. ಪ್ರೋಗ್ರಾಂ, ಎಲೆಕ್ಟ್ರಾನಿಕ್ಸ್, ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ಪ್ರಶಿಕ್ಷಣಾರ್ಥಿಗಳು ನಂತರ ಆದಾಯ-ಉದ್ಯೋಗ ಚಟುವಟಿಕೆಗಳಲ್ಲಿ ಮತ್ತು ಸ್ವಯಂ-ಉದ್ಯೋಗ ಉದ್ಯಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ.