News Karnataka Kannada
Sunday, April 28 2024
ಬೆಂಗಳೂರು ನಗರ

ಗಂಡನ ತೂಕದಿಂದ ಹೆಂಡತಿ ಕಾಲು ಮುರಿತ: ಪತಿಯ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ

Anjuman Sanstha condemns derogatory post on Shivaji Maharaj
Photo Credit : News Kannada

ಬೆಂಗಳೂರು: “ನನ್ನ ಗಂಡ​ ​150 ಕೆ.ಜಿ ತೂಕವಿದ್ದು, ನನ್ನ ಮೇಲೆ ಕುಳಿತುಕೊಳ್ಳುತ್ತಿದ್ದ. ಇದರಿಂದ ನನ್ನ ಕಾಲು ನರ ಊತಗೊಂಡು ಮುರಿದಿದೆ ಎಂದು ಪೊಲೀಸರಿಗೆ ಪತಿಯ ವಿರುದ್ಧ ಪತ್ನಿ ದೂರು ನೀಡಿದ ಘಟನೆಯೊಂದು ನಡೆದಿದೆ.

ಬ್ಯಾಟರಾಯನಪುರ ಪೊಲೀಸ್​ ಠಾಣೆಯಲ್ಲಿ ಈ ವಿಚಿತ್ರ ಪ್ರಕರಣ ದಾಖಲಾಗಿದೆ. ಚರಣ್ ಗೌಡ ಮತ್ತು ಚೈತ್ರಾ ಇಬ್ಬರ ನಡುವೆ ಪದೇ ಪದೇ ಗಲಾಟೆಯಾಗುತ್ತಿತ್ತು. ಇದರಿಂದ ಬೇಸತ್ತ ಚೈತ್ರಾ ಠಾಣೆ ಮೆಟ್ಟಿಲೇರಿದ್ದಾಳೆ. ನನ್ನ ಪತಿಯ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪಟ್ಟು ಹಿಡಿದಿದ್ದಾಳೆ.

ಚೈತ್ರಾ ಮತ್ತು ಚರಣ್​ ನಡುವೆ ಜಗಳ ಮಾತಿಗೆ ಮಾತು ಬೆಳೆಯುತಿತ್ತು. ಆದರೆ ಗಂಡ ಹೊಡೆಯುತ್ತಿರಲಿಲ್ಲ. ಆದರೆ ಪತ್ನಿಯ ಕಾಲು ಮೇಲೆ ಕುಳಿತುಕೊಳ್ಳುತ್ತಿದ್ದ. ಹೀಗೆ ವಿಚಿತ್ರವಾಗಿ ಕೋಪ ತೀರಿಸಿಕೊಳ್ತಿದ್ದ. ಹೀಗೆ ಕುಳಿತುಕೊಂಡ ಕಾರಣ ಚೈತ್ರಾ ಕಾಲಿಗೆ ಪೆಟ್ಟಾಗಿ ಕಾಲು ಮುರಿದಿದೆ. ಸದ್ಯ ಚೈತ್ರಾ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈಗ ಪತಿ ಚರಣ್​ ವಿರುದ್ಧ ಸರಿಯದ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು