News Karnataka Kannada
Saturday, May 04 2024
ಬೆಂಗಳೂರು ನಗರ

ಬೆಂಗಳೂರು: ವಿ. ಸೋಮಣ್ಣ ಪ್ರತಿಷ್ಠಾನದ ವತಿಯಿಂದ ‘ವಿಜಯ ಪಥ’ ಗ್ರಂಥದ ಲೋಕಾರ್ಪಣೆ

Vijay
Photo Credit : News Kannada

ಬೆಂಗಳೂರು: ವಿ. ಸೋಮಣ್ಣರವರು ಕರ್ನಾಟಕ ರಾಜಕಾರಣದಲ್ಲಿ ಕಳೆದ ನಾಲ್ಕು ದಶಕಗಳಿಂದ ತಮ್ಮದೇ ಆದ ಮಾದರಿಯನ್ನು ಮೂಡಿಸಿದವರು. ವಿ. ಸೋಮಣ್ಣನವರ ವ್ಯಕ್ತಿತ್ವ, ರಾಜಕೀಯದ ಅನುಭವ, ಸೇವಾ ಮನೋಭಾವ, ಸಂಘಟನಾ ಸಾಮರ್ಥ್ಯ ಕುರಿತು ದಾಖಲಿಸಬೇಕೆಂಬ ಸದುದ್ದೇಶದಿಂದ ಅವರ ಹಿತೈಷಿಗಳು, ಹತ್ತಿರದಿಂದ ಬಲ್ಲ ನಾಡಿನ ವಿವಿಧ ಕ್ಷೇತ್ರಗಳ ಗಣ್ಯಮಾನ್ಯರು ಬರೆದಿರುವ ಲೇಖನಗಳನ್ನು ಒಳಗೊಂಡಿರುವ, ವಿ. ಸೋಮಣ್ಣ ಪ್ರತಿಷ್ಠಾನದ ವತಿಯಿಂದ ಪ್ರಕಾಶನಗೊಂಡಿರುವ ‘ವಿಜಯ ಪಥ’ ಗ್ರಂಥದ ಲೋಕಾರ್ಪಣೆ ಸಮಾರಂಭ ಇದೇ ಅಕ್ಟೋಬರ್ 20 ರಂದು ಗುರುವಾರ ಸಂಜೆ 5ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪೂಜ್ಯ ಜಗದ್ಗುರು ‘ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ (ಶ್ರೀ ಜಗದ್ಗುರು ವೀರಸಿಂಹಾಸನ ಸಂಸ್ಥಾನಮಠ ಸುತ್ತೂರು ಶ್ರೀಕ್ಷೇತ್ರ) ಹಾಗೂ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಯವರ (ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠ ಶ್ರೀ ಆದಿಚುಂಚನಗಿರಿ ಶ್ರೀಕ್ಷೇತ್ರ) ದಿವ್ಯ ಸಾನ್ನಿಧ್ಯದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿಗಳಾದ ಬಸವರಾಜ ಎಸ್. ಬೊಮ್ಮಾಯಿ ಅವರು ‘ವಿಜಯ ಪಥ’ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ಇನ್ನು ಶಾಸಕರು ಮತ್ತು ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್ ಅಶೋಕ್, ವಿ.ಸೋಮಣ್ಣ ಪ್ರತಿಷ್ಠಾನ ಶೈಲಜ ಸೋಮಣ್ಣ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಖ್ಯಾತ ವಿಮರ್ಶಕರಾದ ಡಾ. ಬೈರಮಂಗಲ ರಾಮೇಗೌಡರು ‘ವಿಜಯ ಪಥ’ಗ್ರಂಥದ ಕುರಿತು ಮಾತನಾಡಲಿದ್ದಾರೆ.

ಇನ್ನು ವಿ. ಸೋಮಣ್ಣ ಅವರು ಈಗಿನ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮರಳವಾಡಿ ಗ್ರಾಮದ ಕೃಷಿ ಕುಟುಂಬದ  ವೀರಣ್ಣರವರ ಪುತ್ರರಾಗಿ ಜನಿಸಿ, ಸ್ವಗ್ರಾಮದಲ್ಲಿ ಪ್ರಾಥಮಿಕ, ಕನಕಪುರದಲ್ಲಿ ಪ್ರೌಢ ಶಿಕ್ಷಣ, ಬೆಂಗಳೂರಿನಲ್ಲಿ ಪದವಿ ಮುಗಿಸಿ ತಮ್ಮ ವೃತ್ತಿ ಬದುಕಿನೊಂದಿಗೆ ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಯಾವುದೇ ರಾಜಕೀಯ ಪ್ರಭಾವ ಇಲ್ಲದೆ ಸ್ವಸಾಮರ್ಥ್ಯ ಮತ್ತು ಶ್ರಮದಿಂದಲೇ ಬೆಳೆಯುವುದರ ಮೂಲಕ ಇಂದು ಜನನಾಯಕರಾಗಿದ್ದಾರೆ. ಸೇವೆ, ಜನಪರವಾದ ಕಾಳಜಿ, ಸಾಧಿಸುವ ಛಲ, ತಮ್ಮ ಸಂಘಟನಾ ಚಾತುರ್ಯ ರಾಜಧಾನಿ ಬೆಂಗಳೂರು ನಗರ ಪಾಲಿಕೆ ಸದಸ್ಯರಾ ರಾಜಕೀಯವಾಗಿ ಗುರುತಿಸಿಕೊಂಡು, ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಜಿ.ಹೆಚ್ ಪಟೇಲ್ ,  ಬಿ.ಎಸ್.ಯಡಿಯೂರಪ್ಪ,  ಡಿ.ವಿ.ಸದಾನಂದಗೌಡ,  ಜಗದೀಶ್ ಶೆಟ್ಟರ್ ಅವರುಗಳ ಸಂಪುಟಗಳಲ್ಲಿ ಸಚಿವರಾಗಿ, ಪ್ರಸ್ತುತ ಬಸವರಾಜ ಬೊಮ್ಮಾಯಿರವರ ಸಂಘಟದಲ್ಲಿ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾಗಿದ್ದಾರೆ. ಯಾವುದೇ ಇಲಾಖೆಯ ಸಚಿವರಾಗಿದ್ದರೂ ತಮ್ಮ ಕಾರ್ಯವೈಖರಿಯ ಮೂಲಕ ಆ ಇಲಾಖೆಗಳಿಗೆ ಗೌರವ ತಂದಿದ್ದಾರೆ, ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರುಗಳಿಗೆ ತಲುಪಿಸುವಲ್ಲಿ ಸಫಲರಾಗಿದ್ದಾರೆ.

ಸ್ಥಳ:ರವೀಂದ್ರ ಕಲಾಕ್ಷೇತ್ರ

ದಿನಾಂಕ: ಅಕ್ಟೋಬರ್ 20, ಗುರುವಾರ

ಸಮಯ: ಸಂಜೆ 5

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು