ಬೆಂಗಳೂರು: ಬೆಂಗಳೂರು ಮೆಟ್ರೋದಲ್ಲಿ ಮಹಿಳೆಯರಿಗೆ ಸಾಲು ಸಾಲು ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು, ಇದೀಗ ಬಿಎಂಆರ್ಸಿಎಲ್ ಕಡಿವಾಣ ಹಾಕಲು ಮುಂದಾಗಿದೆ. ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ್ರೆ ಭಾರೀ ದಂಡ ಕಟ್ಬೇಕು. ದಂಡ ಪರಿಷ್ಕರಣೆ ಮಾಡಿ ಬಿಎಂಆರ್ಸಿಎಲ್ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ದಂಡ ಪರಿಷ್ಕರಣೆ ಮಾಡಲಾಗಿದೆ.
ಇನ್ನು ಮುಂದೆ ಮಹಿಳೆಯರ ಮೇಲೆ ಅನುಚಿತ ವರ್ತನೆ ತೋರಿದ್ರೆ 500 ಅಲ್ಲ ಬರೋಬ್ಬರಿ 10,000 ದಂಡ ಕಟ್ಬೇಕು. ಈ ಮೊದಲು ಅನುಚಿತ ವರ್ತನೆ ತೋರಿದ್ರೆ ಮೆಟ್ರೋ ಆಕ್ಟ್ ಪ್ರಕಾರ 500 ರೂಪಾಯಿ ದಂಡ ಹಾಕಲಾಗ್ತಿತ್ತು. ಇದೀಗ ದಂಡದ ಮೊತ್ತವನ್ನು 10 ಸಾವಿರಕ್ಕೆ ಏರಿಕೆ ಮಾಡಲಾಗಿದೆ.