ಬೆಂಗಳೂರು, ಜೂ.23: ಬೆಂಗಳೂರಿನ ಯಲಹಂಕ ಸಮೀಪದ ನಾಗೇನಹಳ್ಳಿ ಗ್ರಾಮದಲ್ಲಿ ಲಕ್ನೋ ಮೂಲದ ಮಹಿಳೆಯೊಬ್ಬರು ಅಪಾರ್ಟ್ ಮೆಂಟ್ ನ 10ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಅಮೃತಾ ಶರ್ಮಾ (27) ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶರ್ಮಾ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಅತ್ತೆ-ಮಾವನೊಂದಿಗೆ ವಾಸಿಸುತ್ತಿದ್ದ ಶರ್ಮಾ ಗುರುವಾರ ರಾತ್ರಿ 10ನೇ ಮಹಡಿಯಿಂದ ಜಿಗಿದಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.