ಬೆಂಗಳೂರು: ರಾಜ್ಯದಲ್ಲಿ ಅತಂತ್ರ ಚುನಾವಣಾ ಫಲಿತಾಂಶ ಸಾಧ್ಯತೆ ಹಿನ್ನೆಲೆ ಕಾಂಗ್ರೆಸ್ ನಾಯಕರು ಗೆಲ್ಲುವ ಜೆಡಿಎಸ್ ಅಭ್ಯರ್ಥಿಗಳನ್ನು ಸಂಪರ್ಕ ಮಾಡಿದ್ದಾರೆ ಎಂದು ರಾಜಕೀಯ ಮೂಲಗಳಿಂದ ತಿಳಿದು ಬಂದಿದೆ.
ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗೆಲ್ಲುವ ಜೆಡಿಎಸ್ ಅಭ್ಯರ್ಥಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳು ಯಾವುದೇ ಆಮಿಷಕ್ಕೆ ಒಳಗಾಗಬೇಡಿ, ಸರ್ಕಾರ ರಚನೆಯಲ್ಲಿ ನಾವು ಪ್ರಮುಖ ಪಾತ್ರ ವಹಿಸುತ್ತೇವೆ. ಯಾವುದಕ್ಕೂ ಯಾರು ವಿಚಲಿತರಾಗಬೇಡಿ. ಯಾವುದೇ ರಾಜಕೀಯ ಬೆಳವಣಿಗೆ ಇದ್ದರೂ ತಿಳಿಸಿ ಎಂದು ಸೂಚನೆ ನೀಡಿದ್ದಾರಂತೆ.