ಬೆಂಗಳೂರು: ಅಪಾರ್ಟ್ಮೆಂಟ್ನ 29ನೇ ಮಹಡಿಯಿಂದ ಜಿಗಿದು 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬೇಗೂರು ಬಳಿ ಸಂಭವಿಸಿದೆ.
ಬಾಲಕಿ ಅಪಾರ್ಟ್ಮೆಂಟ್ನಲ್ಲಿ ಅಪ್ಪ-ಅಮ್ಮನ ಜೊತೆಗೆ ವಾಸವಿದ್ದಳು. ಇಂದು (ಜ.24) ನಸುಕಿನ ಜಾವ 5 ಗಂಟೆ ಸುಮಾರಿಗೆ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಲಕಿಯ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಿನ ಜಾವ 4.30ರ ಸುಮಾರ ಎಚ್ಚರಗೊಂಡು ಬಾಲಕಿ ಮನೆಯ ಪಡಸಾಲೆಗೆ ಬಂದಿದ್ದಾಳೆ. ಈ ವೇಳೆ ತಾಯಿ ಬಾಲಕಿಗೆ ಪ್ರಶ್ನೆ ಮಾಡಿದ್ದಾರೆ. ತಾಯಿಯ ಪ್ರಶ್ನೆಗೆ ಬಾಲಕಿ ಸರಿಯಾಗಿ ಉತ್ತರ ಕೊಡದೆ ಮತ್ತೆ ಮಲಗುವುದಾಗಿ ಹೇಳಿ ರೂಮಿಗೆ ಹೋಗಿದ್ದಾಳೆ. ತಾಯಿ ಕೂಡ ಕೋಣೆಯೊಳಗೆ ಹೋಗಿದ್ದಾರೆ.ಆದರೆ ಸ್ವಲ್ಪಹೊತ್ತಿನ ಬಳಿಕ 5 ಗಂಟೆ ಸುಮಾರಿಗೆ ಬಾಲಕಿ 29ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಾಲಕಿಯ ರಕ್ತಸಿಕ್ತ ಶವ ಕಂಡ ಕಾವಲುಗಾರ ಪೋಷಕರಿಗೆ ಮತ್ತು ಅಪಾರ್ಟ್ಮೆಂಟ್ ಅಸೋಸಿಯೇಷನ್ಗೆ ಮಾಹಿತಿ ನೀಡಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821