News Karnataka Kannada
Wednesday, May 08 2024
ಬೆಂಗಳೂರು ನಗರ

ಬ್ರಾಂಡ್‌ ಬೆಂಗಳೂರಿನ ಖ್ಯಾತಿ ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯ: ಸಿಎಂ ಬಸವರಾಜ ಬೊಮ್ಮಾಯಿ

Everyone's cooperation is needed to enhance the reputation of brand Bengaluru.
Photo Credit : By Author

ಬೆಂಗಳೂರು : ನಾಡಪ್ರಭು ಕೆಂಪೇಗೌಡರ ಬೆಂಗಳೂರು ಸುಂದರವಾಗಿದೆ. ಬ್ರಾಂಡ್ ಬೆಂಗಳೂರಿನ ಹೆಸರು ಉಳಿಸುವುದು ಬಹಳ ಕಷ್ಟ, ಹಾಳು ಮಾಡುವುದು ಸುಲಭ. ಆದ್ದರಿಂದ ನಾವೆಲ್ಲ ಬ್ರಾಂಡ್ ಬೆಂಗಳೂರಿನ ಹೆಸರನ್ನು ಉಳಿಸೋಣ. ಎಲ್ಲರ ಸಹಕಾರದಿಂದ ಬೆಂಗಳೂರಿಗೆ ಉತ್ತಮ ಹೆಸರು ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಬಿಬಿಎಂಪಿ ವತಿಯಿಂದ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಪಂತರಪಾಳ್ಯದಲ್ಲಿ ನಿರ್ಮಿಸಿರುವ “ಡಾ. ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ” ಹಾಗೂ ಅಭಿವೃದ್ಧಿಪಡಿಸಲಾಗಿರುವ “ನಾಯಂಡಹಳ್ಳಿ ಕೆರೆ”ಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನರು ಅದೃಷ್ಟವಂತರು ನಂಬಿದ ಜನರಿಗೆ, ವಿಶ್ವಾಸಕ್ಕೆ ನಿಷ್ಠೆಯಿಂದ 24 ಗಂಟೆಗಳ ಕಾಲ ಜನಸೇವೆ ಮಾಡುವ ಸೋಮಣ್ಣರವರು ನಿಜವಾದ ಜನನಾಯಕ. ರಾಜ್ಯದಲ್ಲಿ 3 ಲಕ್ಷ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಅಲ್ಲದೇ ರಾಜ್ಯದಲ್ಲಿ 5ಲಕ್ಷ ಮನೆ ನಿರ್ಮಿಸಲಾಗಿದೆ ಇದರ ಹಿಂದಿನ ಶಕ್ತಿ ಸೊಮಣ್ಣ.  ಬೆಂಗಳೂರು ನಗರ ಬ್ರಾಂಡ್ ಬೆಂಗಳೂರು ಆಗಿದೆ, ವಿದೇಶದಲ್ಲಿಯೊ ಸಹ ನಗರ ಖ್ಯಾತಿ ಇದೆ. 7000 ಸಾವಿರ ಸಿಸಿ ಕ್ಯಾಮರ ಮಹಿಳೆಯರಿಗೆ ಸುರಕ್ಷತೆಗಾಗಿ ನಗರದಾದ್ಯಂತ ಆಳವಡಿಸಲಾಗಿದೆ. ರಾಜಾಕಾಲುವೆ 1000 ಕೋಟಿ ಅನುದಾನ ಬೆಂಗಳೂರು ನಗರ ಅಭಿವೃದ್ದಿಗೆ 6500 ಕೋಟಿ ಅನುದಾನ ನೀಡಿದ್ದೇವೆ. ನಾಡಪ್ರಭು ಕೆಂಪೇಗೌಡರ ಬೆಂಗಳೂರು ಸುಂದರವಾಗಿದೆ. ಬ್ರಾಂಡ್ ಬೆಂಗಳೂರಿನ ಹೆಸರು ಉಳಿಸುವುದು ಬಹಳ ಕಷ್ಟ, ಹಾಳು ಮಾಡುವುದು ಸುಲಭ. ಆದ್ದರಿಂದ ನಾವೆಲ್ಲ ಬ್ರಾಂಡ್ ಬೆಂಗಳೂರಿನ ಹೆಸರನ್ನು ಉಳಿಸೋಣ. ಎಲ್ಲರ ಸಹಕಾರದಿಂದ ಬೆಂಗಳೂರಿಗೆ ಉತ್ತಮ ಹೆಸರು ಬರಲಿದೆ ಎಂದು ಹೇಳಿದರು.

ಸಚಿವ ವಿ.ಸೋಮಣ್ಣ ರವರು ಮಾತನಾಡಿ ಕರ್ನಾಟಕ ರತ್ನ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್ ರವರ ಸ್ಮರಣೆಯಲ್ಲಿ ಪಂತರಪಾಳ್ಯ ಸುತ್ತಮುತ್ತಲ ನಿವಾಸಿಗಳಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಸ್ಲಂ ಪ್ರದೇಶ, ಕಳ್ಳಕಾರರು ಪ್ರದೇಶವಾಗಿದ್ದ ಸ್ಥಳೀಯರ ಜನರ ಆಶೀರ್ವಾದದಿಂದ ಡಾ.ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ. ದಾಸರಹಳ್ಳಿಯಲ್ಲಿ ಡಾ.ಬಾಲಗಂಗಾಧರ ನಾಥ ಸ್ವಾಮೀಜಿಗಳ ಹೆಸರಿನಲ್ಲಿ 300 ಹಾಸಿಗೆ ಮತ್ತು ಪಂತರಪಾಳ್ಯದಲ್ಲಿ 205 ಹಾಸಿಗೆಗಳ ಆಸ್ಪತ್ರೆ ಮತ್ತು 10 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಶಾಲಾ ಕಾಲೇಜುಗಳು, ದೇವಸ್ಥಾನಗಳು, ಉದ್ಯಾನಗಳು, 10೦ ಕ್ಕೂ ಅಧಿಕ ಶುದ್ದ ಕುಡಿಯುವ ನೀರಿನ ಘಟಕ, ನೂತನ ಪೊಲೀಸ್ ಠಾಣೆ ಹಾಗೂ 60ಕ್ಕೂ ಉದ್ಯಾನವನಗಳ ನವೀಕರಿಸಲಾಗಿದೆ. ನಾಯಂಡಹಳ್ಳಿ ಕೆರೆಯನ್ನು ಅಭಿವೃದ್ದಿಗೊಳಿಸಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಏಳು ಐ.ಎ.ಎಸ್.ತರಬೇತಿ ಕೇಂದ್ರಗಳಿದ್ದು, ಬಡವರ್ಗದ ವಿದ್ಯಾರ್ಥಿಗಳ ಒಳತಿಗಾಗಿ ಸರಕಾರಿ ಶಾಲೆಗಳನ್ನು ಆಧುನಿಕರಣಗೊಳಿಸಲಾಗಿದೆ. ಸಾಮಾನ್ಯ ಜನರ ಒಡನಾಡಿಯಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ನಟ ರಾಘವೇಂದ್ರ ರಾಜ್ ಕುಮಾರ್ ಅವರು ಮಾತನಾಡಿ ಅಭಿಮಾನಿಗಳು ದೇವರುಗಳಿಗೆ ಸ್ಟಾಷ್ಟಂಗ ನಮಸ್ಕಾರ. ಪುನೀತ್ ಅವರ ಹೆಸರಿನಲ್ಲಿ ಇಂಥ ಆಸ್ಪತ್ರೆಯನ್ನು ನಿರ್ಮಿಸಿದ ಸಚಿವ ಸೋಮಣ್ಣ ಅವರಿಗೆ ಧನ್ಯವಾದಗಳು. ನೂತನವಾಗಿ ಲೋಕಾರ್ಪಣೆಯಾದ ಈ ಆಸ್ಪತ್ರೆಯನ್ನು ದೇವಸ್ಥಾನ ಎಂದು ಭಾವಿಸಿ. ಈ ಆಸ್ಪತ್ರೆಯನ್ನು ಶುಚಿಯಾಗಿಟ್ಟುಕೊಂಡು ಸದ್ಬಳಕೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದ ಅವರು, ಪುನೀತ್ ರಾಜ್ ಕುಮಾರ್ ಅವರಿಗೆ ಅಣ್ಣನಾಗಿ ಇದ್ದೆ ಎಂಬುದೇ ಸಂತೋಷ. ಪುನೀತ್ ಡೊಡ್ಡತನ ಅದರಿಂದ ಅವನ ಮೇಲಿನ‌ ಗೌರವ ಹೆಚ್ಚಾಗಿದೆ ಎಂದರು.

ಆರೋಗ್ಯ ಸಚಿವರಾದ ಕೆ.ಸುಧಾಕರ್, ಚಲನಚಿತ್ರ ನಟ,ನಿರ್ಮಾಪಕ ಡಾ.ರಾಘವೇಂದ್ರ ರಾಜ್ ಕುಮಾರ್, ಚಲನಚಿತ್ರ ನಿರ್ಮಾಪಕರಾದ ಶ್ರೀಮತಿ ಆಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್.ಆರ್.ರಮೇಶ್ ರವರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಆಸ್ಪತ್ರೆ ಮತ್ತು ನಾಯಂಡಹಳ್ಳಿ ಕೆರೆಯನ್ನು ಮಾನ್ಯ ಮುಖ್ಯಮಂತ್ರಿಗಳು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯರು, ಅಧಿಕಾರಿಗಳು, ಆಸ್ಪತ್ರೆ ನಿರ್ಮಾಣ ಸಂಸ್ಥೆಯಾದ  ಸ್ವಯಂ ಪ್ರಭ ಕನ್ಸ್ತ್ರಾಕ್ಷನ್ ಕಂಪನಿ ಯವರು  ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು