News Karnataka Kannada
Monday, April 29 2024
ಬೆಂಗಳೂರು ನಗರ

ಸೈಲೆಂಟ್ ಆಗಿದ್ದ ಡಾ. ಬ್ರೋ ಮತ್ತೊಂದು ಅಪಾಯಕಾರಿ ವಿಡಿಯೋ ಮೂಲಕ ರಿ ಎಂಟ್ರಿ

ಬೆಂಗಳೂರು: ಡಾ. ಬ್ರೋ ಖ್ಯಾತಿ ಗಗನ್‌ ಯಾರಿಗೆ ಗೊತ್ತಿಲ್ಲ ಹೇಳಿ. ದೇಶ ವಿದೇಶದ ಅಚ್ಚರಿಗಳನ್ನು ಕನ್ನಡಿಗರಿಗೆ ತೋರಿಸುವ ಯೂಟ್ಯೂಬರ್‌ ಗಳಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ.
Photo Credit : News Kannada

ಬೆಂಗಳೂರು: ಡಾ. ಬ್ರೋ ಖ್ಯಾತಿ ಗಗನ್‌ ಯಾರಿಗೆ ಗೊತ್ತಿಲ್ಲ ಹೇಳಿ. ದೇಶ ವಿದೇಶದ ಅಚ್ಚರಿಗಳನ್ನು ಕನ್ನಡಿಗರಿಗೆ ತೋರಿಸುವ ಯೂಟ್ಯೂಬರ್‌ ಗಳಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ.

ಇಂತಹ ಡಾ.ಬ್ರೊ ಕಳೆದ ತಿಂಗಳು ಚೀನಾ ದೇಶವನ್ನು ಹೊಗಳಿ ವಿಡಿಯೋ ಮಾಡಿದ್ದರು ಡಾ.ಬ್ರೊ. ಚೀನಾದ ಬೀಜಿಂಗ್‌ನಲ್ಲಿ ವೀಡಿಯೋ ಮಾಡುತ್ತಾ ಮಾತನಾಡಿರುವ ಡಾ ಬ್ರೋ, ಮುಂದುವರೆದ ದೇಶದ ಮಕ್ಕಳೆಲ್ಲಾ ಸ್ಕೂಲ್ ಕಾಲೇಜ್ ಗಳಲ್ಲಿ, ಹೊಸ ಹೊಸ ಸ್ಕಿಲ್‌ ಕಲಿತರೆ , ನಮ್ಮ ಮಕ್ಕಳು ಜಾತಿ ಧರ್ಮ ಅಂತ ಕಿತ್ತಾಡ್ತಾವೇ! ನಾವು ಈಗಿರುವ ಚೀನಾ ಮಟ್ಟಕ್ಕೆ ಹೋಗಬೇಕಾದರೆ, ಇನ್ನೂ ಕನಿಷ್ಟ 70 ವರ್ಷ ಬೇಕು ಅಂದ್ರೆ, ಆಗ ಚೀನಾ ಇನ್ನೆಲ್ಲಿಗೆ ಹೋಗಿರುಂತೆ ಯೋಚಿಸಿ. ಜಾತಿ ಧರ್ಮ ಅನ್ನುವ ನಂಜು ಬಿಟ್ಟು ಹೊರಬನ್ನಿ ಎಂದು ಹೇಳಿದ್ದರು. ಇದರಿಂದ ಹಲವರ ಕೆಂಗಣ್ಣಿಗೆ ಅವರು ಗುರಿಯಾಗಿದ್ದರು. ಭಾರತೀಯನಾಗಿ ಚೀನಾಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ಹೊಗಳಿದ ಡಾ. ಬ್ರೋಗೆ ದೇಶದ್ರೋಹಿ ಪಟ್ಟ ಕಟ್ಟಿದ್ದರು. ಇದರ ಬೆನ್ನಲ್ಲೇ, ಕಳೆದೊಂದು ತಿಂಗಳಿನಿಂದ ಡಾ.ಬ್ರೋ ಸೈಲೆಂಟ್​ ಆಗಿ ಬಿಟ್ಟಿದ್ದರು. ಇದೀಗ ಮತ್ತೆ ಆಕ್ಟೀವ್‌ ಆಗಿರುವ ಬ್ರೊ ರಷ್ಯಾದ ಸೋಚಿಯಲ್ಲಿರುವ ಅಪಾಯಕಾರಿ ಸೇತುವೆ ಮೇಲೆ ಡಾ.ಬ್ರೋ ಪ್ರಯಾಣ ಮಾಡಿರುವ ವಿಡಿಯೋ ಶೇರ್ ಮಾಡಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಅಪಾಯಕಾರಿ ಎನ್ನುವಂಥ ರಷ್ಯಾದ ಸೇತುವೆಯ ವಿಡಿಯೋ ಶೇರ್​ ಮಾಡಿದ್ದಾರೆ. ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ ಕಟ್ಟಲಾಗಿರುವ ಸೇತುವೆ ಇದಾಗಿದೆ. ಕಾಲು ಜಾರಿದ್ರೆ ಕೈಲಾಸವೇ ಗತಿ ಎಂದು ಹೇಳಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು