News Karnataka Kannada
Monday, May 06 2024
ಬೆಂಗಳೂರು ನಗರ

ಕೆ.ಆರ್.ಪೇಟೆ: ನಾವು ಮಾಡುವ ಕೆಲಸದಲ್ಲಿ ಶಿಸ್ತು, ಬದ್ಧತೆ ಅಗತ್ಯ- ಡಾ.ನಾರಾಯಣಗೌಡ

Discipline, commitment is essential in what we do: Dr Narayana Gowda
Photo Credit : By Author

ಕೆ.ಆರ್.ಪೇಟೆ: ನಮ್ಮ ಪಾಲಿನ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡಿ ನಮ್ಮ ಕೆಲಸದ ಮೇಲೆ ಬದ್ಧತೆಯನ್ನು ತೋರುವುದೇ ನಮ್ಮ ಏಳ್ಗೆಗೆ ಸೋಪಾನವಾಗುತ್ತದೆ ಎಂದು ಸಚಿವ ಡಾ.ನಾರಾಯಣಗೌಡ ಹೇಳಿದರು.

ಕೆ.ಆರ್.ಪೇಟೆ ಪಟ್ಟಣದ ಸುಭಾಷ್‌ನಗರ ಬಡಾವಣೆಯಲ್ಲಿರುವ ಪ್ರಜಾಪ್ರಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಸಂದೇಶ ನೀಡಿ ಮಾತನಾಡಿದರು.

ಮಹಾಶಿವರಾತ್ರಿ ಜಾಗರಣೆಯ ಪುಣ್ಯದಿನವಾದ ಇಂದು ನಾವು ಅಜ್ಞಾನದ ಅಂಧಕಾರದಿಂದ ಹೊರಬಂದು ಧಾರ್ಮಿಕ ಜಾಗೃತಿಯನ್ನು ಮೂಡಿಸಿಕೊಂಡು ಸತ್ಯದ ದಾರಿಯಲ್ಲಿಯೇ ಸಾಗಿ ಗುರಿಸಾಧನೆ ಮಾಡುತ್ತೇವೆ ಎಂದು ಮಾನಸಿಕವಾಗಿ ನಿಶ್ಚಯ ಮಾಡಿಕೊಳ್ಳುವುದೇ ಜಾಗರಣೆಯ ಸತ್ಯ ಸಂದೇಶವಾಗಿದೆ. ಅಂತೆಯೇ ನಾವು ಮಾಡುವ ಯಾವುದೇ ಕೆಲಸವು ಚಿಕ್ಕದಿರಲಿ ಅಥವಾ ದೊಡ್ಡದಾಗಿರಲಿ ನಾವು ಮಾಡುವ ಕೆಲಸದಲ್ಲಿ ನಿಜವಾದ ಸಾರ್ಥಕತೆಯನ್ನು ಹೊಂದಿ ಅಭಿವೃದ್ಧಿ ಹೊಂದುವುದೇ ನಿಜವಾದ ಶಿವರಾತ್ರಿಯ ಸತ್ಯದರ್ಶನವಾಗಿದೆ.

ನಾವು ಮಾಡುವ ಕೆಲಸವು ಸಮಾಜಮುಖಿಯಾಗಿದ್ದು ಭಗವಂತನು ಮೆಚ್ಚುವಂತಿರಬೇಕೇ ಹೊರತು ಇನ್ನೊಬ್ಬರಿಗೆ ನೋವುಂಟು ಮಾಡುವಂತಿರಬಾರದು ಎಂದು ಎಲ್ಲಿಯವರೆಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ನಾವು ಭಗವಂತನ ಸಾಕ್ಷಾತ್ಕಾರ ಹೊಂದಲು ಸಾಧ್ಯವಿಲ್ಲ. ಸದಾ ಕಾಲವೂ ಒಂದಿಲ್ಲೊಂದು ಕೆಲಸದ ಒತ್ತಡದಲ್ಲಿ ಮುಳುಗಿಹೋಗಿರುವ ನಾವು ಆತ್ಮಜಾಗೃತಿಗೆ, ಭಗವಂತನ ಒಲುಮೆಗೆ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ. ರಾಮಾಯಣ, ಮಹಾಭಾರತ, ಭಗವದ್ಗೀತೆ ಗ್ರಂಥಗಳ ಪಾರಾಯಣ ಮಾಡುವುದು, ಪುಸ್ತಕಗಳು ಹಾಗೂ ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನವನ್ನು ವಿಕಾಸಗೊಳಿಸಿಕೊಳ್ಳುವುದು ನಮ್ಮ ಮೊದಲ ಆಧ್ಯತೆಯಾಗಬೇಕು. ಆಗ ಮಾತ್ರ ನಾವು ಸಾಧನೆ ಮಾಡುವ ಜೊತೆಗೆ ಹೆಸರು ಕೀರ್ತಿಯನ್ನು ಸುಲಭವಾಗಿ ಗಳಿಸಬಹುದಾಗಿದೆ. ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮವು ವಿಶ್ವದಾಧ್ಯಂತ ಶಾಖೆಗಳನ್ನು ತೆರೆದು ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮವು ಜಗ್ತಿನಲ್ಲಿಯೇ ಯಾವುದೂ ಇಲ್ಲ. ಆತ್ಮಜಾಗೃತಿಗಾಗಿ ನಾವು ಸನ್ಮಾರ್ಗದಲ್ಲಿ ನಡೆಯುವ ಜೊತೆಗೆ ಮಾನವತೆಗೆ ಒತ್ತು ನೀಡಿ ಪರೋಪಕಾರ ಗುಣಗಳು ಹಾಗೂ ನೈತಕತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂಬ ಸತ್ಯಸಂದೇಶವನ್ನು ನಾಡಿಗೆ ನೀಡುತ್ತಿದೆ. ವಿಶ್ವಸಂಸ್ಥೆಗೆ ನಮ್ಮ ದೇಶದ ಶಾಂತಿಯ ಪ್ರತಿನಿಧಿಯಾಗಿರುವ ಬ್ರಹ್ಮಕುಮಾರಿ ಆಶ್ರಮದ ಸಂದೇಶಗಳನ್ನು ವಿಶ್ವದ ರಾಷ್ಟ್ರಗಳು ಪಾಲಿಸಿದರೆ ಸಾಕು ಯುದ್ಧ, ಭಯೋತ್ಪಾಧಕ ಚಟುವಟಿಕೆಗಳಿಂದ ಮುಕ್ತವಾದ ಆರೋಗ್ಯವಂತ ಸಮಾಜವನ್ನು ಸುಲಭವಾಗಿ ನಾವು ನಿರ್ಮಿಸಬಹುದಾಗಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು.

ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡರ ಧರ್ಮಪತ್ನಿ ದೇವಕಿ, ಜಿಲ್ಲಾ ಪಂಚಾಯಿತಿ ಮಾಜಿಉಪಾಧ್ಯಕ್ಷ ಶೀಳನೆರೆಅಂಬರೀಶ್, ರಾಜ್ಯ ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣೂಹುಲ್ಲೂರು, ಪ್ರಜಾಪ್ರಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವ್ಯವಸ್ಥಾಪಕಿ ಸವಿತಕ್ಕ, ಪುರಸಭೆ ಸದಸ್ಯೆ ಶೋಭಾ ದಿನೇಶ್, ಕೆ.ಆರ್.ನೀಲಕಂಠ, ಮಾಜಿಸದಸ್ಯೆ ಬಿ.ಎನ್.ಪದ್ಮಾವತಿ, ಕೆ.ಆರ್.ಪುಟ್ಟಸ್ವಾಮಿ, ಡಾ.ದಿವಾಕರ್, ಸುಧಕ್ಕಾ, ಸಿಂದಘಟ್ಟ ಮೋಹನ್, ನಜೀರ್ ಬೈಯ್ಯ, ಸಚಿವರ ಆಪ್ತಸಹಾಯಕ ದಯಾನಂದ, ನಾಯಕನಹಳ್ಳಿ ಭೀಮಣ್ಣ, ಶಿಕ್ಷಕಿ ಅನಿತಾಚೇತನ್ ಸೇರಿದಂತೆ ಟಿ.ಎಸ್.ಮಂಜುನಾಥ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು