News Karnataka Kannada
Friday, May 17 2024
ಬೆಂಗಳೂರು ನಗರ

ಬೆಂಗಳೂರು ರಿಯಲ್‌ ಎಸ್ಟೇಟ್‌ ಮಾರುಕಟ್ಟೆ: ಐಷಾರಾಮಿ ಮನೆಗಳಿಗೆ ಹೆಚ್ಚಿದ ಬೇಡಿಕೆ- ಕ್ರೆಡೈ ಹೇಳಿಕೆ

Demand for luxury homes as Bengaluru real estate market soars: CREDAI
Photo Credit : Freepik

ಬೆಂಗಳೂರು, ಏ,15: ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯು 2022-2023ರ ಆರ್ಥಿಕ ವರ್ಷದಲ್ಲಿ ಗಣನೀಯ ಅಭಿವೃದ್ಧಿಯನ್ನು ಪ್ರದರ್ಶಿಸಿದೆ. ಕೋವಿಡ್‌- 19 ಸೃಷ್ಟಿಸಿದ ಸಾಕಷ್ಟು ಅಡೆತಡೆಗಳನ್ನು ದಾಟಿ ನಗರದ ರಿಯಲ್‌ ಎಸ್ಟೇಟ್‌ ಉದ್ಯಮವು ಗಮನಾರ್ಹ ಚೇತರಿಕೆಯನ್ನು ಕಂಡಿದೆ.

ರಿಯಲ್‌ ಎಸ್ಟೇಟ್‌ ವಲಯವು ದಾಸ್ತಾನು ಪೂರೈಕೆಯಲ್ಲಿ ಇಳಿಕೆಯನ್ನು ಕಂಡಿದೆ. ಆದರೂ ಐಷಾರಾಮಿ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬೆಂಗಳೂರಿನ ಕ್ರೆಡಾಯ್‌ ಪ್ರಕಾರ ದೊಡ್ಡ ಮನೆಗಳ ಕಡೆಗಿನ ಬೇಡಿಕೆ ಹೆಚ್ಚಿದ್ದು, ಕೈಗೆಟಕುವ ಬೆಲೆಯ ಮನೆಗಳ ಬೇಡಿಕೆ ಹಿನ್ನಡೆ ಕಂಡಿದೆ. ಜೊತೆಗೆ ʼರೆಡಿ ಟು ಮೂವ್‌ ಇನ್‌ʼ ಟ್ರೆಂಡ್‌ ಮನೆ ಖರೀದಿದಾರರಲ್ಲಿ ಹೆಚ್ಚುತ್ತಿದೆ.

ʼಪ್ರಸ್ತುತ ಆರ್ಥಿಕ ವರ್ಷದಲ್ಲಿ ಐಷಾರಾಮಿ ಮನೆಗಳಿಗೆ ಬೇಡಿಕೆ ಹೆಚ್ಚಿದ್ದು ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆ ಉಂಟಾಗಿದೆ. ದೊಡ್ಡದಾದ ಹಾಗೂ ʼರೆಡಿ ಟು ಮೂವ್‌ ಇನ್‌ʼ ಮನೆಗಳ ಬಗ್ಗೆ ಮನೆ ಖರೀದಿದಾರರು ಆಸಕ್ತಿ ತೋರುತ್ತಿದ್ದು, ಐಷಾರಾಮಿ, ಆರಾಮದಾಯಕ ಹಾಗೂ ಆಕರ್ಷಕ ಶೈಲಿಯ ಪ್ರೀಮಿಯಂ ಮನೆಗಳನ್ನು ಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ. ಈ ಪ್ರವೃತ್ತಿಯು ಮುಂಬರುವ ವರ್ಷಗಳಲ್ಲಿಯೂ ಮುಂದುವರೆಯುವ ನಿರೀಕ್ಷೆ ಇದ್ದು ಐಷಾರಾಮಿ ಮನೆಗಳನ್ನು ಲಾಭದಾಯಕ ವಲಯವನ್ನಾಗಿ ಮಾಡುವ ಸಾಕಷ್ಟು ಅವಕಾಶಗಳು ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳಿಗೆ ಇದೆʼ ಎಂದು ಕ್ರೆಡೈ ಬೆಂಗಳೂರಿನ ಅಧ್ಯಕ್ಷರಾದ ಭಾಸ್ಕರ್‌ ಟಿ. ನಾಗೇಂದ್ರಪ್ಪ ಅಭಿಪ್ರಾಯಿಸಿದ್ದಾರೆ.

ನಿರ್ಮಾಣ ವೆಚ್ಚ, ಕಾರ್ಮಿಕರು, ಶಾಸನಬದ್ಧ ಶುಲ್ಕಗಳು ಹಾಗೂ ಕಚ್ಚಾವಸ್ತುಗಳ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದರೂ ರಿಯಲ್‌ ಎಸ್ಟೇಟ್‌ ಕ್ಷೇತ್ರ ಮಾತ್ರ ಮಹತ್ವದ ಬೆಳವಣಿಗೆಯನ್ನೇ ಸಾಧಿಸುತ್ತಿದೆ. ಸಾಂಕ್ರಾಮಿಕ ರೋಗ ಸೃಷ್ಟಿಸಿದ ಅನಿಶ್ಚಿತತೆಯ ಕಾರಣದಿಂದಾಗಿ ಜನರಲ್ಲಿ ಮನೆಯ ಮಾಲೀಕತ್ವವನ್ನು ಹೊಂದುವ ಬಯಕೆ, ಅಗತ್ಯತೆ ಹೆಚ್ಚುತ್ತಿದೆ. ಇದರಿಂದಾಗಿ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಹೆಚ್ಚೆಚ್ಚು ಹೂಡಿಕೆಯಾಗುತ್ತಿದೆ.

ಸಾಂಕ್ರಾಮಿಕ ರೋಗದ ನಂತರ ಜನರು ಐಷಾರಾಮಿ ಮನೆಗಳತ್ತ ತಮ್ಮ ಆಸಕ್ತಿಯನ್ನು ಹರಿಸಿದ್ದಾರೆ. ಕ್ರೆಡಾಯ್‌ ಪ್ರಕಾರ, ʼಸಾಂಕ್ರಾಮಿಕ ರೋಗ ಸೃಷ್ಟಿಸಿದ ಅನಿಶ್ಚಿತತೆಯಿಂದಾಗಿ ಜನರು ತಮ್ಮ ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಹೆಚ್ಚು ಆದ್ಯತೆ  ಕೊಡಲಾರಂಭಿಸಿದ್ದಾರೆ. ಇದರಿಂದಾಗಿ ಜನರು ತಮ್ಮದೇ ಆದ ಸ್ವಂತ ಮನೆಯನ್ನು ಹೊಂದುವುದರ ಜೊತೆಗೆ ಆರಾಮದಾಯಕ ಹಾಗೂ ಸುರಕ್ಷಿತವಾಗಿರಬೇಕು ಎಂದು ಬಯಸುತ್ತಿದ್ದಾರೆ. ಈ ಪ್ರವೃತ್ತಿ ಹೆಚ್ಚಿನ ಆದಾಯ ಹೊಂದಿರುವವರಿಗೆ ಮಾತ್ರ ಸೀಮಿತವಾಗದೆ ಸಾಧಾರಣ ಆದಾಯ ಹೊಂದಿರುವವರಲ್ಲಿಯೂ ಹೆಚ್ಚಾಗಿ ಕಂಡುಬರುತ್ತಿದೆ. ಕೆಲಸ ಮಾಡುವ ಸ್ಥಳಾವಕಾಶ, ಜಿಮ್‌, ಮನರಂಜನಾ ಕೇಂದ್ರ ಸೇರಿದಂತೆ ಬದುಕಿನ ವಿವಿಧ ಅಗತ್ಯತೆಗಳನ್ನು ಪೂರೈಸಬಲ್ಲ ಸ್ವಂತ ಮನೆಯನ್ನು ಹೊಂದುವುದು ಎಷ್ಟು ಮುಖ್ಯ ಎಂಬುದನ್ನು ಕೋವಿಡ್‌ ಜನರಿಗೆ ಅರ್ಥ ಮಾಡಿಸಿದೆʼ.

ʼಪ್ರಪಂಚವನ್ನೇ ಭಯಭೀತಗೊಳಿಸಿದ ಸಾಂಕ್ರಾಮಿಕ ರೋಗವು ಮನೆಯ ಕುರಿತಾದ ಜನರ ಯೋಚನಾ ವಿಧಾನವನ್ನೇ ಬದಲಾಯಿಸಿದೆ. ಮನೆಯನ್ನು ಕೇವಲ ವಾಸಿಸುವ ಸ್ಥಳ ಎಂದು ಭಾವಿಸದೆ ಜೀವನದ ತಮ್ಮ ಅಗತ್ಯಗಳನ್ನು ಪೂರೈಸುವ ಪವಿತ್ರ ಸ್ಥಳವಾಗಿ ಭಾವಿಸಿಕೊಳ್ಳುತ್ತಿದ್ದಾರೆ. ಐಷಾರಾಮಿ ಮನೆಗಳು ಕೇವಲ ಕಲಾತ್ಮಕವಾಗಿ ಆಹ್ಲಾದಕರವಲ್ಲ. ಬದಲಾಗಿ ಕ್ರಿಯಾತ್ಮಕ ಹಾಗೂ ಅತ್ಯಾಧುನಿಕ ಸೌಲಭ್ಯಗಳಿಂದ ಸುಸಜ್ಜಿತಗೊಳಿಸಲಾದ ಸ್ಥಳಾವಕಾಶವಾಗಿರಲಿದೆ. ಐಷಾರಾಮಿ ಮನೆಗಳೆಡೆಗಿನ ಜನರ ಆಸಕ್ತಿ ಕೇವನ ಬದಲಾವಣೆಯ ಟ್ರೆಂಡ್‌ ಆಗಿರದೆ ಜನರು ತಮ್ಮ ಮನೆಗಳ ಕುರಿತಾಗಿ ಕಟ್ಟಿಕೊಳ್ಳುವ ಕನಸಿನ ಪ್ರತಿಬಿಂಬವಾಗಿದೆ. ಕೋವಿಡ್‌ ಈ ಟ್ರೆಂಡ್‌ ಅನ್ನು ಉತ್ತೇಜಿಸಿದ್ದರೂ ಕೋವಿಡ್‌ ನಂತರವೂ ಜನರ ಇದೇ ಮನಸ್ಥಿತಿ ಮುಂದುವರೆಯಲಿದೆʼ ಎಂದು ಅವರು ಹೇಳಿದರು.

ಬಡ್ಡಿ ದರಗಳಲ್ಲಿ ಕುಸಿತ ಹಾಗೂ ಸಂಭಾವ್ಯ ಖರೀದಿದಾರರು ಹೆಚ್ಚಿನ ಉಳಿತಾಯ ಮಾಡುತ್ತಿರುವ ಕಾರಣದಿಂದಾಗಿ ಈ ವಲಯವು ಹೆಚ್ಚು ಏರಿಳಿತಗಳನ್ನು ಕಾಣುತ್ತಿದೆ. ಈ ಎಲ್ಲಾ ಅಂಶಗಳು ಒಟ್ಟಾರೆಯಾಗಿ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯ ಬೆಳವಣಿಗೆ ಹಾಗೂ ಸುಸ್ಥಿರತೆಗೆ ಕೊಡುಗೆಯನ್ನು ನೀಡುತ್ತಿವೆ.

ʼಮನೆಗಳು ತಮ್ಮ ಪಾತ್ರಗಳನ್ನು ಬಹುವಿಧವಾಗಿ ಬದಲಾಯಿಸಿಕೊಂಡಿವೆ. ಮನೆಯ ಸ್ಥಳಾವಕಾಶಗಳು ಆಸ್ಪತ್ರೆಗಳಾಗಿ, ಕಚೇರಿಯಾಗಿ, ರೆಸ್ಟೊರೆಂಟ್‌ಗಳಾಗಿ, ಮನರಂಜನೀಯ ಸ್ಥಳಗಳಾಗಿ ಬದಲಾಗಿವೆ. ಕಡಿಮೆ ವೆಚ್ಚ ಹಾಗೂ ಹೆಚ್ಚಿನ ಉಳಿತಾಯದ ಕಾರಣದಿಂದಾಗಿ ಜನರು ತಮ್ಮ ಕನಸಿನ ಮನೆಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆʼ ಎಂದು ಅವರು ಹೇಳಿದರು.

ಮಾಹಿತಿ ತಂತ್ರಜ್ಞಾನ (ಐಟಿ) ಹಾಗೂ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸೇವಾ ವಲಯವು (ಐಟಿಇಎಸ್‌) ಬೆಂಗಳೂರಿನಲ್ಲಿ ಪ್ರಮುಖ ಮನೆ ಖರೀದಿದಾರರಾಗಿ ಹೊರಹೊಮ್ಮಿದೆ. ನಗರದಲ್ಲಿನ ಟ್ರಾಫಿಕ್‌ ಸಮಸ್ಯೆಯಿಂದಾಗಿ ಜನರು ತಮ್ಮ ಕಚೇರಿಗಳ ಸಮೀಪವೇ ಮನೆ ಮಾಡಿ ವಾಸಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಮನೆ ಮಾಲೀಕರ ಜೀವನ ಅನುಭವವನ್ನು ಉನ್ನತೀಕರಿಸಲು ಡೆವಲಪರ್‌ಗಳು ತಂತ್ರಜ್ಞಾನವನ್ನು ಹೆಚ್ಚೆಚ್ಚಾಗಿ ಅಳವಡಿಸಿಕೊಳ್ಳುತ್ತಿದ್ದಾರೆ.

ಅಂಕಿ ಅಂಶಗಳನ್ನು ವಿಶ್ಲೇಷಿಸಲು AI ಬಳಸುವುದರಿಂದ ಹಿಡಿದು ವ್ಯಾಕ್ಯೂಮ್‌ ಕ್ಲೀನರ್‌ಗಳು, ಮನೆಯ ಗಾರ್ಡನ್‌ಗಳ ಯೋಗಕ್ಷೇಮವನ್ನು ಮಾನಿಟರ್‌ ಮಾಡುವ ಸಾಧನಗಳನ್ನು ಸಂಯೋಜಿಸುವವರೆಗೆ ರಿಯಲ್‌ ಎಸ್ಟೇಟ್‌ ಬ್ರಾಂಡ್‌ಗಳು ಗ್ರಾಹಕ ಸೇವಾ ಅನುಭವವನ್ನು ಹೆಚ್ಚಿಸುತ್ತಿವೆ. ಈ ಪರಿಕರಗಳು ದಕ್ಷತೆಯನ್ನು ಹೆಚ್ಚಿಸಿ ಮನೆ ನಿರ್ವಹಣಾ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತವೆ. ಇದರಿಂದ ಹೆಚ್ಚು ಸುವ್ಯವಸ್ಥಿತ ಹಾಗೂ ಗ್ರಾಹಕ-ಸ್ನೇಹಿ ಅನುಭವ ದೊರೆಯುತ್ತದೆ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿನ ಈ ತಾಂತ್ರಿಕ ರೂಪಾಂತರದಿಂದಾಗಿ ಮನೆ ಮಾಲೀಕರಿಗೆ ತಮ್ಮ ಮನೆಗಳನ್ನು ನಿರ್ವಹಿಸಲು ಹೆಚ್ಚು ಅನುಕೂಲಕರ ಹಾಗೂ ಸಮಸ್ಯಾ ರಹಿತ ಮಾರ್ಗಗಳು ಸಿಕ್ಕಂತಾಗುತ್ತವೆ.

ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಈ ಉತ್ತೇಜನಾಕಾರಿ ಬೆಳವಣಿಗೆಯ ಕುರಿತು ನಾಗೇಂದ್ರಪ್ಪ ಅವರು, ʼಸವಾಲುಗಳ ಹೊರತಾಗಿಯೂ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ಬೆಳವಣಿಗೆಯ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಗ್ರಾಹಕ ಕೇಂದ್ರಿತ ವಿಧಾನ ಹಾಗೂ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವುದು ಈ ಮಾರುಕಟ್ಟೆಯ ಯಶಸ್ಸಿಗೆ ಕಾರಣವಾಗಿದೆ. ಬೆಂಗಳೂರಿನ ಈ ವಲಯದ ಮಾರುಕಟ್ಟೆ ಭವಿಷ್ಯದ ಬಗ್ಗೆ ನಾವು ಹೆಚ್ಚು ಆಶಾವಾದಿಯಾಗಿದ್ದೇವೆʼ ಎಂದು ಹೇಳಿದ್ದಾರೆ.

ಕ್ರೆಡೈ  ಬೆಂಗಳೂರು ಕುರಿತು
1999ರಲ್ಲಿ ಸ್ಥಾಪನೆಯಾದ ಕ್ರೆಡೈ ಬೆಂಗಳೂರು, ಬೆಂಗಳೂರಿನ ರಿಯಲ್‌ ಎಸ್ಟೇಟ್‌ ವಲಯದ ಸಂಘಟನೆಯಾಗಿ ಕೆಲಸ ಮಾಡುತ್ತದೆ. 233 ಸಮರ್ಪಿತ ಹಾಗೂ ಪ್ರತಿಷ್ಠಿತ ಸದಸ್ಯರನ್ನು ಹೊಂದಿದ್ದು ರಿಯಲ್‌ ಎಸ್ಟೇಟ್‌ ಅನ್ನು ಅಧಿಕೃತ ಹಾಗೂ ಸರಳಗೊಳಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಾಜ್ಯ ಒಕ್ಕೂಟ ಹಾಗೂ ರಾಷ್ಟ್ರ ಒಕ್ಕೂಟದ ಭಾಗವಾಗಿದೆ ಈ ಕ್ರೆಡೈ ಬೆಂಗಳೂರು. ಗ್ರಾಹಕರು ಹಾಗೂ ಬಿಲ್ಡರ್‌ಗಳಿಗೆ ಹೆಚ್ಚು ಪಾರದರ್ಶಕವಾದ ಹಾಗೂ ಭ್ರಷ್ಟಾಚಾರ ಮುಕ್ತ ಮಾರುಕಟ್ಟೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿಕ್ರೆಡೈ ಬೆಂಗಳೂರು ಕೆಲಸ ಮಾಡುತ್ತದೆ. ಇದು ಸರ್ಕಾರಿ ಪ್ರತಿನಿಧಿಗಳು, ನೀತಿ ನಿರೂಪಕರು, ಹೂಡಿಕೆದಾರರು, ಹಣಕಾಸು ಕಂಪೆನಿಗಳು, ಗ್ರಾಹಕರು ಹಾಗೂ ರಿಯಲ್‌ ಎಸ್ಟೇಟ್‌ ವೃತ್ತಿಪರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ.

ಹೆಚ್ಚಿನ ಮಾಹಿತಿಗಾಗಿ: https://www.credaibengaluru.com/

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು