News Karnataka Kannada
Saturday, May 04 2024
ಬೆಂಗಳೂರು ನಗರ

9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ: ಶಿಕ್ಷಣ ಇಲಾಖೆ ನಿರ್ಧಾರ

Board exams for class 9, 11 students: Education department
Photo Credit : News Kannada

ಬೆಂಗಳೂರು: ಮಕ್ಕಳ ಕಲಿಕಾ ಗುಣಮಟ್ಟ ಅರ್ಥ ಮಾಡಿಕೊಳ್ಳಲು, ಕಲಿಕಾ ಬಲವರ್ಧನೆ ಹೆಚ್ಚಿಸಲು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇದೀಗ ಮತ್ತೊಂದು ಮಹತ್ತರ ನಿರ್ಧಾರ ಕೈಗೊಂಡಿದೆ. 5 ಮತ್ತು 8ನೇ ತರಗತಿಯಂತೆ, 9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಈ ಹಿಂದೆ ಬೋರ್ಡ್ ಎಕ್ಸಾಂ ಅಂದ್ರೆ ಎಸ್‌ ಎಸ್‌ ಎಲ್‌ ಸಿ, ಪಿಯು ಪರೀಕ್ಷೆ ನೆನಪಾಗುತ್ತಿತ್ತು. ಆದರೀಗ ಆ ಪರಿಕಲ್ಪನೆ ಬದಲಾಗಿದೆ. 5 ಮತ್ತು 8 ರ ಜೊತೆಗೆ 9 ಮತ್ತು 11 ನೇ ತರಗತಿಗೆ ಕೂಡ ಬೋರ್ಡ್ ಎಕ್ಸಾಂ ನಡೆಸಲು ಇಲಾಖೆ ನಿರ್ಧಾರ ಮಾಡಿದ್ದು, ಇಲ್ಲಿ SSLC ಮತ್ತು ಪಿಯುಸಿ ಹಾಗೇ 9 ಮತ್ತು 11 ನೇ ತರಗತಿ ಪರೀಕ್ಷೆ ನಡೆಸುವ ರೀತಿಯಲ್ಲಿ ಬದಲಾವಣೆ ಇರಲಿದೆ.

ಅದರಂತೆ ಪ್ರಸಕ್ತ 2023/24 ನೇ ಸಾಲಿನಲ್ಲಿಯೇ ಈ ನಿಯಮ ಜಾರಿ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಸೂಚನೆ ಕೊಟ್ಟಿದೆ. ರಾಜ್ಯ ಪಠ್ಯಕ್ರಮ ಅನುಸರಿಸುವ ಎಲ್ಲಾ ಅನುದಾನಿತ, ಸರ್ಕಾರಿ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಈ ವರ್ಷವೇ ಪರೀಕ್ಷೆ ನಡೆಸಲು ಆದೇಶ ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು