News Karnataka Kannada
Sunday, April 28 2024
ಬೆಂಗಳೂರು ನಗರ

ಬೆಂಗಳೂರು: 5 ಚಿನ್ನ, 1 ಬೆಳ್ಳಿ ಪದಕದೊಂದಿಗೆ ಮೊದಲ ಸ್ಥಾನ ಪಡೆದ ಕು. ರಿಯಾ ಎಲ್ಲಿಝಬೆತ್ ಆಚಯ್ಯ

Mysore
Photo Credit : By Author

ಬೆಂಗಳೂರು: ಬೆಂಗಳೂರುನಲ್ಲಿ ಡಿಸೆಂಬರ್ 11 ರಿಂದ 21 ರವರಗೆ ನಡೆಯುತ್ತಿರುವ 60ನೇ ರಾಷ್ಟ್ರೀಯ ಸ್ಪೀಡ್ ರೋಲರ್ ಸ್ಕೆಟಿಂಗ್ ಚಾಂಪಿಯನ್ಶಿಪ್- 2022 ಕ್ರೀಡಾಕೂಟದಲ್ಲಿ ರಾಜ್ಯದ ಹಿರಿಯ ಸ್ಕೆಟರ್, ಮೈಸೂರಿನ ಕು. ರಿಯಾ ಎಲ್ಲಿಝಬೆತ್ ಆಚಯ್ಯ 5 ಚಿನ್ನ ಹಾಗೂ 1 ಬೆಳ್ಳಿ ಪದಕದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.

ಪದಕಗಳ ವಿವರ
1. 10ಕೆ ರೋಡ್ ಪಾಯಿಂಟ್ಸ್ ಪ್ಲಸ್ ಎಲಿಮಿನೇಷನ್ ರೇಸ್- ಚಿನ್ನ
2. 15ಕೆ ರೋಡ್ ಎಲಿಮಿನೇಷನ್ ರೇಸ್- ಚಿನ್ನ
3. ರೋಡ್ ಒನ್ ಲ್ಯಾಪ್ ರೇಸ್ – ಚಿನ್ನ
4. ರಿಂಕ್ 500ಮೀ ಮತ್ತು ಡಿ ರೇಸ್ – ಬೆಳ್ಳಿ
5. 4ಕೆ ಮಿಕ್ಸೆಡ್ ರಿಲೇ – ಚಿನ್ನ
6. 3ಕೆ ರಿಲೇ – ಚಿನ್ನ

ಇದೇ ತಿಂಗಳು ಬೆಂಗಳೂರಿನಲ್ಲಿ 23ರಿಂದ 25 ರವರಗೆ ನಡೆಯಲಿರುವ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಪ್ರಕ್ರಿಯೆಕ್ಕೆ ತಾಲಿಮು ನಡೆಸುತ್ತಿದ್ದು, ಮುಂದಿನ ವರ್ಷ ನಡೆಯಲಿರುವ ಏಶಿಯನ್ ಗೇಮ್ಸ್ ಮತ್ತು ವಿಶ್ವ ರೋಲರ್ ಸ್ಕೆಟರ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಪದಕ ಗೆಲ್ಲುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.

ಕು. ರಿಯಾ ಆಚಯ್ಯ ನಗರದ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇನ್ಫಾರ್ಮಶನ್ ಸೈನ್ಸ್ ವಿಭಾಗದ 7ನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದು, ಅವರ ಈ ಸಾಧನೆಯನ್ನು ಕಾಲೇಜು ಆಡಳಿತ ಮಂಡಳಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ “ವರ್ಷದ ಅತ್ಯುತ್ತಮ ವಿದ್ಯಾರ್ಥಿ” ಎಂದು ಅಭಿನಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು