ಬೆಂಗಳೂರು: ಬೆಂಗಳೂರು-ಮೈಸೂರು ನಡುವಿನ ಇ-ಬಸ್ ಸೇವೆಯ ಮೊದಲ ತಿಂಗಳಲ್ಲಿ ಸರ್ಕಾರಿ ಸ್ವಾಮ್ಯದ ಕೆ ಎಸ್ ಆರ್ ಟಿ ಸಿ ಲಾಭ ಗಳಿಸಿದೆ.
ಈ ಬಸ್ ಸೇವೆಯನ್ನು ಜನವರಿ 16 ರಂದು ಪ್ರಾರಂಭಿಸಲಾಯಿತು. ಮೊದಲ ತಿಂಗಳಲ್ಲಿ ನಿಗಮವು ರೂ.9.13 ಲಕ್ಷಗಳ ಲಾಭವನ್ನು ಗಳಿಸಿತು.
ಈ ಬಸ್ಸಿನ ವೆಚ್ಚವು ಪ್ರತಿ ಕಿಲೋಮೀಟರ್ ಗೆ ರೂ.68 ಆಗಿದ್ದರೆ, ಆದಾಯವು ರೂ.83.77 ಆಗಿದೆ.
ಮುಂದಿನ ಎರಡು ವಾರಗಳಲ್ಲಿ ಬೆಂಗಳೂರಿನಿಂದ ಎಲ್ಲಾ ಪ್ರಮುಖ ಸ್ಥಳಗಳಿಗೆ ಕೆ ಎಸ್ ಆರ್ ಟಿ ಸಿ ಇನ್ನೂ 25 ಇ-ಬಸ್ ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.