News Karnataka Kannada
Friday, May 03 2024
ಬೆಂಗಳೂರು ನಗರ

ದೇಶವನ್ನು ಅಭಿವೃದ್ದಿಯ ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಬೆಂಗಳೂರಿನದ್ದು ಪ್ರಮುಖ ಪಾತ್ರ

Bengaluru has an important role to play in taking the country to another level of development: Suresh Prabhu
Photo Credit : News Kannada

ಬೆಂಗಳೂರು ಅ.19: ವಿಶ್ವದ ತಾಂತ್ರಿಕ ಹಬ್‌ ಆಗಿರುವ ಬೆಂಗಳೂರು, ದೇಶವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರ ಕನಸು ನನಸು ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಮಾಜಿ ಕೇಂದ್ರ ರೈಲ್ವೇ ಸಚಿವರಾದ ಸುರೇಶ್‌ ಪ್ರಭು ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ದೇಶದ ಪ್ರಮುಖ ವ್ಯವಹಾರ ಸಲಹಾ ಸಂಸ್ಥೆಯಾಗಿರುವ ಮನೋಹರ್‌ ಚೌಧರಿ ಅಂಡ್‌ ಅಸೋಸಿಯೇಟ್ಸ್‌ನ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ಕೇವಲ ಕರ್ನಾಟಕ ರಾಜ್ಯದ ರಾಜಧಾನಿಯಾಗಿಲ್ಲ. ದೇಶದ ತಾಂತ್ರಿಕ ರಾಜಧಾನಿ ಅಷ್ಟೇ ಅಲ್ಲದೇ, ವಿಶ್ವದ ತಾಂತ್ರಿಕ ಹಬ್‌ ಆಗಿ ಹೊರಹೊಮ್ಮಿದೆ. ಸ್ಟಾರ್ಟ್‌ ಅಪ್‌ಗಳು, ಯೂನಿಕಾರ್ನ್‌ ಕಂಪನಿಗಳು, ಬಂಡವಾಳ ಹೂಡಿಕೆಯ ಉತ್ತಮ ಪರಿಸರದ ಮೂಲಕ ವಿಶ್ವದ ಗಮನ ಸೆಳೆಯುತ್ತಿದೆ. ಈ ಮೂಲಕ ದೇಶವನ್ನ ಅಭಿವೃದ್ದಿಯ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಕನಸನ್ನ ನನಸು ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ವ್ಯವಹಾರ ಸಲಹಾ ಸಂಸ್ಥೆಯಾಗಿರುವ ಮಹೋಹರ್‌ ಚೌಧರಿ ಅಂಡ್‌ ಅಸೋಸಿಯೇಟ್ಸ್‌ ಒಂದು ಸಂಸ್ಥೆ ವ್ಯವಹಾರಿಕವಾಗಿ ವಿಶ್ವದಾದ್ಯಂತ ತನ್ನ ಸೇವೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ ಸೇವೆಗಳನ್ನು ನೀಡುತ್ತಿದೆ. ದೇಶದಲ್ಲಿ ಇನ್ನು ಹಲವಾರು ಕಡೆ ರೆಡ್‌ ಟೇಪಿಸಮ್‌ ಇದೆ. ನಿಯಮಗಳು ಹಾಗೂ ಕಾನೂನುಗಳ ಹಲವಾರು ಅಡೆತಡೆಗಳಿವೆ. ಈ ಅಡೆತಡೆಗಳನ್ನ ಸರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಸಲಹಾ ಸಂಸ್ಥೇಗಳು ಮುಖ್ಯ ಪಾತ್ರವಹಿಸುತ್ತವೆ. ಒಂದು ಸಂಸ್ಥೆಯ ಅಭಿವೃದ್ದಿಗೆ ಅದರ ಆಡಳಿತ ಬಹಳ ಮುಖ್ಯ. ಸರಿಯಾದ ನೈತಿಕ ಮೌಲ್ಯಗಳನ್ನು ಹೊಂದಿರುವ ಸಣ್ಣ ಸಂಸ್ಥೇಗಳು ಕೂಡಾ ದೊಡ್ಡದನ್ನ ಸಾಧಿಸಬಲ್ಲವು. ಇದನ್ನ ಅಳವಡಿಸಿಕೊಂಡಿರುವ ಎಂಸಿಎ ನಂತಹ ಸಲಹಾ ಸಂಸ್ಥೆಗಳು ಅಭಿವೃದ್ದಿಯನ್ನು ಕಂಡಿವೆ ಎಂದು ಹೇಳಿದರು.

ಸಂಸ್ಥೆಯ ಸಂಸ್ಥಾಪಕರಾದ ಟಿ ಎನ್‌ ಮನೋಹರನ್‌ ಮಾತನಾಡಿ, ಒಂದು ಸಂಸ್ಥೆ ಬೆಳವಣೆಗೆಗೆ ಅಗತ್ಯವಿರುವ ಆಡಳಿತಾತ್ಮಕ ಸೇವೆಗಳನ್ನು ನೀಡುತ್ತೇವೆ. ಬೇರೆ ಬೇರೆ ದೇಶಗಳಲ್ಲಿ ಹೇಗೆ ವ್ಯವಹಾರ ಪ್ರಾರಂಭಿಸಬೇಕು, ಬೇರೆ ದೇಶಗಳ ವ್ಯವಹಾರಗಳು ಇಲ್ಲಿ ಪ್ರಾರಂಭವಾಗಲು ಸಹಾಯಮಾಡುತ್ತೇವೆ. ನಮ್ಮ ದೇಶದ ಹೂಡಿಕೆಯ ಪರಿಸರದ ಬಗ್ಗೆ ತಿಳುವಳಿಕೆ ನೀಡಿ ಅವುಗಳ ಅಭಿವೃದ್ದಿಗೆ ಸಹಾಯ ಮಾಡುತ್ತಿದ್ದೇವೆ. ಹೊರ ದೇಶದ ಪ್ರಮುಖ ಸಂಸ್ಥೆಗಳನ್ನ ದೇಶಕ್ಕೆ ಕರೆತರುವ ಮೂಲಕ ಉದ್ಯೋಗಾವಕಾಶ ದೊರಕಿಸಿಕೊಡುವ ನಿಟ್ಟಿನಲ್ಲೂ ನಾವು ಕಾರ್ಯನಿರತರಾಗಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂಸಿಎ ಸಂಸ್ಥೆಯ ಮುಖ್ಯ ಪಾಲುದಾರರಾದ ಸಚಿನ್‌, ಮುಖ್ಯ ಮ್ಯಾನೇಜಿಂಗ್‌ ಪಾರ್ಟ್‌ನರ್‌ ಆದ ಯೋಗಾನಂಧ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು