News Karnataka Kannada
Monday, April 29 2024
ಬೆಂಗಳೂರು ನಗರ

ಬೆಂಗಳೂರು: ಚಿತ್ರಕಲಾ ಪರಿಷತ್ತಿನಲ್ಲಿ ಕಣ್ಮನ ಸೆಳೆಯುತ್ತಿರುವ ‘ಇಂಡಿಯನ್ ಹಾತ್ ಫೆಸ್ಟಿವಲ್’

Bengaluru: 'Indian Haat Festival' to be held at Chitrakala Parishad
Photo Credit : News Kannada

ಬೆಂಗಳೂರು,ಸೆ. 2: ಚಿತ್ತಾರ ಸಹಯೋಗದೊಂದಿಗೆ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ‘ಇಂಡಿಯನ್ ಹಾತ್ ಫೆಸ್ಟಿವಲ್ ಅನ್ನು ಆಯೋಜಿಸಿದ್ದಾರೆ.ಇಂದಿನಿಂದ 10 ದಿನಗಳ ಕಾಲ ನಡೆಯುವ ಈ ಕರಕುಶಲವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಟಿ ಹಾಗೂ ರೂಪದರ್ಶಿಯರಾದ ಲಾಸ್ಯ ನಾಗರಾಜ್ ಹಾಗೂ ಸುಮನಾ ಗೌಡ ಅವರು ಉದ್ಘಾಟಿಸಿದರು.

ಇನ್ನು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ ನಟಿ ಸುಮನಾ ಗೌಡ “ಚಿತ್ರಕಲಾ ಪರಿಷತ್ ಯಾವಾಗಲೂ ಕಲೆ, ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ. ಇಲ್ಲಿ ಆಯೋಜಿಸಿದ ಈ ಇಂಡಿಯನ್ ಹಾತ್ ಫೆಸ್ಟಿವಲ್ ಗೆ ದೇಶಾದ್ಯಂತ ಕಲಾವಿದರು ಬಂದಿದ್ದಾರೆ. ಅವರಲ್ಲಿನ ಕಲೆಯನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಬಟ್ಟೆಯಿಂದ ಹಿಡಿದು ಮನೆಗೆ ಬೇಕಾಗುವ ಎಲ್ಲಾ ಅಲಂಕಾರಿಕ ಹಾಗೂ ಇತರೆ ವಸ್ತುಗಳು ಇಲ್ಲಿ ಸಿಗಲಿವೆ. ನೋಡುವುದಕ್ಕೂ ಕೂಡ ಒಂದಕ್ಕಿಂತ ಒಂದು ಸುಂದರವಾಗಿದೆ. ಹಾಗೇ ಕೈಗೆಟಕುವ ದರದಲ್ಲಿ ಇದು ಲಭ್ಯವಿರುವುದರಿಂದ ಎಲ್ಲರೂ ಕೂಡ ಇದನ್ನು ಖರೀದಿಸಬಹುದು” ಎಂದರು.

ಹಾಗೇ ನಟಿ ಲಾಸ್ಯ ನಾಗರಾಜ್ ಮಾತನಾಡುತ್ತಾ “ ಸಾಮಾನ್ಯವಾಗಿ ಆನ್ ಲೈನ್ ನಲ್ಲಿ ಖರೀದಿಸುವಾಗ ನಮಗೆ ವಸ್ತುಗಳ ಗುಣಮಟ್ಟದ ಬಗ್ಗೆ ಅಷ್ಟಾಗಿ ತಿಳಿಯುವುದಿಲ್ಲ. ಆದರೆ ಇಲ್ಲಿ ಉತ್ತಮ ಗುಣಮಟ್ಟದ ಜೊತೆಗೆ ವೈವಿಧ್ಯಮಯ ಸಂಗ್ರಹ ಕೂಡ ಸಿಗಲಿದೆ. ಎಲ್ಲಾ ಬಗೆಯ ಅಲಂಕಾರಿಕ ವಸ್ತುಗಳು ಇಲ್ಲಿವೆ. ನೋಡುವುದಕ್ಕೂ ಕೂಡ ತುಂಬಾನೇ ಚೆನ್ನಾಗಿದೆ.ಸೀರೆ, ಕುರ್ತಿ ಆಭರಣಗಳು ನೋಡುಗರ ಕಣ್ಮನ ಸೆಳೆಯುವಷ್ಟು ಸುಂದರವಾಗಿದೆ” ಎಂದು ಖುಷಿಪಟ್ಟರು.

ಇಂದಿನಿಂದ 10 ದಿನಗಳ ಕಾಲ ನಡೆಯುವ ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ನಾನಾ ಕಡೆಯಿಂದ ಬಂದ ಕಲಾವಿದರು ತಮ್ಮ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ. ಅಲಂಕಾರಿಕ ವಸ್ತು, ವೈವಿದ್ಯಮಯ ಉಡುಪು, ಆಭರಣಗಳು ಇಲ್ಲಿ ಲಭ್ಯವಿದೆ. ಕಲಾ ಪ್ರಿಯರಿಗೆ ವಿವಿಧ ಬಗೆಯ ವಸ್ತುಗಳನ್ನು ಕಣ್ತುಂಬಿಕೊಳ್ಳಲು ಹಾಗೇ ಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಕರಕುಶಲ ಕಲಾವಿದರು ತಯಾರಿಸಿದ ನಾನಾ ಬಗೆಯ ಉತ್ಪನ್ನಗಳು ಕಣ್ಣಿಗೆ ಮುದ ನೀಡುವುದರ ಜೊತೆಗೆ ಒಂದೇ ಸೂರಿನಡಿ ನಿಮಗೆ ಸಿಗಲಿವೆ ಜೊತೆಗೆ ಕೈಗೆಟಕುವ ದರದಲ್ಲಿ ಇಲ್ಲಿ ವಸ್ತುಗಳು ದೊರೆಯಲಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು