News Karnataka Kannada
Monday, May 06 2024
ಬೆಂಗಳೂರು ನಗರ

ಬೆಂಗಳೂರು: ಬಿಜೆಪಿ ಸರ್ಕಾರ ಅನೈತಿಕ ಮಾರ್ಗದಿಂದ ರಚನೆಯಾದ ಸರ್ಕಾರ- ಸಿದ್ದರಾಮಯ್ಯ

Airstrip to promote tourism: CM announces in budget
Photo Credit : Facebook

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಬಿಜೆಪಿ ಸರ್ಕಾರದ ಮೇಲೆ ಆರೋಪಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಇದಕ್ಕೆ ಬಿಜೆಪಿ ಪಾಪದ ಪುರಾಣ ಎಂಬ ನಾಮಕರಣ ಮಾಡಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಸರ್ಕಾರ ಅನೈತಿಕ ಮಾರ್ಗದಿಂದ ರಚನೆಯಾದ ಸರ್ಕಾರ. ಇದು ಅನೈತಿಕ ಸರ್ಕಾರ. 2018ರಲ್ಲಿ ಇವರಿಗೆ ಜನ ಆಶೀರ್ವಾದ ಮಾಡಿರಲಿಲ್ಲ. 104 ಸ್ಥಾನವಷ್ಟೇ ಗೆದ್ದಿದ್ದರು. ಆದರೆ ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ರಾಜ್ಯಕ್ಕೆದಲ್ಲಿ ಕೋಟ್ಯಂತರ ರೂಪಾಯಿ ಪಾಪದ ಹಣ ಖರ್ಚು ಮಾಡಿ ಶಆಸಕರನ್ನು ಖರೀದಿಸಿ ಸರ್ಕಾರ ಮಾಡಿದರು. ಈ ಹಣ ಭ್ರಷ್ಟಾಚಾರದ ಹಣ. ಇವರು ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ನಂತರ ರಾಜ್ಯಕ್ಕೆ ದೊಡ್ಡ ಕಳಂಕ ತಂದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ಕೋವಿಡ್ ಬಂದ ಸಮಯದಲ್ಲಿ ಸುಮಾರು 2500-3000 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಮಾಡಿದ್ದರು. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದರು. ಸರ್ಕಾರ ಉತ್ತರ ನೀಡದೆ ಜಾರಿಕೊಂಡರು. ರಾಜ್ಯದಲ್ಲಿ 3.5 ಲಕ್ಷ ಜನ ಸತ್ತಿದ್ದಾರೆ. ಅದರಲ್ಲೂ ಸುಳ್ಳು ಹೇಳಿ ಪರಿಹಾರ ನೀಡಲಿಲ್ಲ. ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು. ಕೇವಲ ಭ್ರಷ್ಟ ಮಾತ್ರವಲ್ಲ, ದುರ್ಬಲ ಸಿಎಂ. ಕೇಂದ್ರ ಹೇಳಿದಂತೆ ವರ್ತಿಸುವ ಸರ್ಕಾರ.

15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ 5495 ಕೋಟಿ ನೀಡಬೇಕು ಎಂದು ತೀರ್ಮಾನವಾಯಿತು. ರಾಜ್ಯದಿಂದ ಆಯ್ಕೆಯಾದ ನಿರ್ಮಲ ಸೀತರಾಮನ್ ಇದನ್ನು ನೀಡಲು ಸಾಧ್ಯವಿಲ್ಲ ಎಂದು ಕೈಬಿಟ್ಟರು. ರಾಜ್ಯದಿಂದ 25 ಮಂದಿ ಸಂಸದರು ಇದ್ದರೂ ಅದನ್ನು ಕೇಳಲಿಲ್ಲ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಕೇಳಲಿಲ್ಲ. 14ನೇ ಹಣಕಾಸು ಆಯೋಗಕ್ಕೂ 15ನೇ ಆಯೋಗಕ್ಕೆ 1.07% ಕಡಿತ ಮಾಡಿದ್ದ ಹಿನ್ನೆಲೆಯಲ್ಲಿ ವಿಶೇಷ ಅನುದಾನವನ್ನು ಹಣಕಾಸು ಆಯೋಗ ಶಿಫಾರಸ್ಸು ಮಾಡಿತ್ತು. ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸವನ್ನು ರಾಜ್ಯ ಬಿಜೆಪಿ ನಾಯಕರು ಮಾಡಲಿಲ್ಲ. ಇವರ ಹೇಡಿತನದಿಂದ ರಾಜ್ಯಕ್ಕೆ ಅನ್ಯಾಯವಾಯಿತು. ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ ತೆರಿಗೆ ಪಾಲು ಕೂಡ ಕಡಿಮೆಯಾಯಿತು. ನಮ್ಮ ರಾಜ್ಯದಿಂದ 3.5 ಲಕ್ಷ ಕೋಟಿ ತೆರಿಗೆ ಕೇಂದ್ರಕ್ಕೆ ಸಲ್ಲಿಕೆಯಾಗುತ್ತಿದೆ. ಆದರೆ ನಮಗೆ ಬೇರೆ ರಾಜ್ಯಗಳಿಗಿಂತ ಅತ್ಯಂತ ಕಡಿಮೆ ಅನುದಾನ ಕೊಟ್ಟಿದ್ದಾರೆ. ಹೀಗಾಗಿ ರಾಜ್ಯ ಸಾಲ ಮಾಡುವ ಸ್ಥಿತಿ ನಿರ್ಮಣವಾಗಿದೆ.

ಸ್ವಾತಂತ್ರ್ಯ ಬಂದಾಗಿನಿಂದ 2018ರವರೆಗೆ ರಾಜ್ಯದ ಸಾಲ 2.40 ಲಕ್ಷ ಕೋಟಿ ಇದ್ದು. ಈಗ ಅದು ಈ ವರ್ಷ ಮಾರ್ಚ್ ಅಂತ್ಯಕ್ಕೆ 5.40 ಲಕ್ಷ ಕೋಟಿ ಆಗಿದೆ. ನಾಲ್ಕು ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದರ ಪರಿಣಾಮವಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ ಹಸಲು ಮತ್ತು ಬಡ್ಡಿ 43 ಸಾವಿರ ಕೋಟಿ ನೀಡಬೇಕಾಗಿದೆ. ಸಾಲ ಹೆಚ್ಚಾದಷ್ಟು ಪಾವತಿ ಹೆಚ್ಚಾಗಿ ಅಭಿವೃದ್ಧಿಗೆ ಕಡಿಮೆ ಹಣ ಇರುತ್ತದೆ. ಪ್ರತಿ ಕನ್ನಡಿಗನ ಮೇಲೆ 86 ಸಾವಿರ ಕೋಟಿ ಸಾಲ ಇದೆ. ಹೀಗೆ ಮುಂದುವರಿದರೆ ರಾಜ್ಯ ಉಳಿಯುತ್ತದಾ? ಈ ರಾಜ್ಯ ಉಳಿಸಲು, ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು.

ಕರ್ನಾಟಕ ಇತಿಹಾಸದಲ್ಲಿ ಎಂದಿರಗೂ ಗುತ್ತಿಗೆದಾರರ ಸಂಘದವರು 40% ಆರೋಪ ಮಾಡಿ ಪ್ರಧಾನ ಮಂತ್ರಿಗೆ ರಾಷ್ಟ್ರಪತಿಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರಲಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ಗುತ್ತಿಗೆದಾರರು 6 ಜುಲೈ 2021ರಂದು ಪತ್ರ ಬರೆದರು. ಇದುವರೆಗೂ ಪ್ರಧಾನಮಂತ್ರಿಗಳು ಇದಕ್ಕೆ ಉತ್ತರ ನೀಡಿಲ್ಲ, ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಮಾತೆತ್ತಿದರೆ ನಾ ಖಾವೂಂಗಾ ನಾ ಖಾನೇದೂಂಗಾ ಎನ್ನುತ್ತಾರೆ. ಇದು ಡೋಂಗಿತನ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೇವಲ ಯೋಜನೆ ಅನುಮತಿಗೆ 40% ಕಮಿಷನ್ ನೀಡಬೇಕು ಎಂದು ಹೇಳಿದ್ದಾರೆ. ಇದರ ಜತೆಗೆ ನೇಮಕಾತಿ, ಪೋಸ್ಟಿಂಗ್, ವರ್ಗಾವಣೆ, ಬಡ್ತಿ ವಿಚಾರದಲ್ಲಿ ಲಂಚ ಪಡೆಯುತ್ತಿದ್ದಾರೆ. ಅಧಿಕಾರಿಗಳು ಬಾಯಿ ಬಿಡಲು ಆಗುತ್ತಿಲ್ಲ. ರಾಜ್ಯದ ಇತಿಹಾಸದಲ್ಲೇ ಈ ರೀತಿ ಆಗಿರಲಿಲ್ಲ. ಹೊಟೇಲ್ ಮೆನು ಪಟ್ಟಿಯಂತೆ ಲಂಚದ ಪಟ್ಟಿ ಮಾಡಿದೆ. ಈ ಸರ್ಕಾರ ಅಲಿಬಾಬಾ ಮತ್ತು 40 ಕಳ್ಳರಂತೆ ಆಗಿದೆ. ಹೀಗಾಗಿ ಈ ಸರ್ಕಾರದ ವಿರುದ್ಧ ಆರೋಪ ಪಟ್ಟಿ ಮಾಡಿ ಜನರ ಮುಂದೆ ಇಡುತ್ತಿದ್ದೇವೆ.

ಈ ವಿಚಾರದಲ್ಲಿ ಜನ ತೀರ್ಮಾನ ಮಾಡಬೇಕು. ಜನ, ಅಧಿಕಾರಿಗಳು ಈ ಸರ್ಕಾರದಿಂದ ಬೇಸತ್ತಿದ್ದಾರೆ. ದ್ವೇಷದ ರಾಜಕಾರಣದಿಂದ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರು ಆಂತಂಕದಿಂದ ಬದುಕುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ. ರೈತರ ಆತ್ಮಹತ್ಯೆ ವಿಚಾರದಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಈ ದುಸ್ಥಿತಿಗೆ ಬಿಜೆಪಿ ಸರ್ಕಾರ ರಾಜ್ಯವನ್ನು ತಂದಿದೆ. ಶೂನ್ಯ ಅಭಿವೃದ್ಧಿ, ಸಾಲದ ಹೊರೆಯಿಂದ ರಾಜ್ಯವನ್ನು 2 ದಶಕಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಹೀಗಾಗಿ ಜನರನ್ನು ಭೇಟಿ ಮಾಡಿ ಅವರ ಧ್ವನಿಯಾಗಲು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಬಸ್ ಯಾತ್ರೆ ಆರಂಭಿಸುತ್ತಿದ್ದು, ನಂತರ ಸಮಯ ಕಡಿಮೆ ಇರುವುದರಿಂದ ಎರಡು ಗುಂಪುಗಳಾಗಿ ಮಾಡಿ ಒಂದು ಗುಂಪು ಶಿವಕುಮಾರ್ ಅವರ ನೇತೃತ್ವದಲ್ಲಿ ಹಿರಿಯ ನಾಯಕರ, ಮತ್ತೊಂದು ಗುಂಪಿನಲ್ಲಿ ನನ್ನ ನೇತೃತ್ವದಲ್ಲಿ ಹಿರಿಯ ನಾಯರು ಪ್ರವಾಸ ಮಾಡುತ್ತೇವೆ. ಮೊದಲು ನಮ್ಮ ತಂಡ ಉತ್ತರ ಕರ್ನಾಟಕ ಭಾಗದಲ್ಲಿ ಶಿವಕುಮಾರ್ ಅವರ ತಂಡ ದಕ್ಷಿಣ ಕರ್ನಾಟಕದಲ್ಲಿ ಪ್ರವಾಸ ಮಾಡಿದರೆ, ನಂತರ ಅವರು ಉತ್ತರ ಕರ್ನಾಟಕ, ನಾನು ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡುತ್ತೇವೆ.

ಇವರ ದುರಾಡಳಿತ, ರಾಜ್ಯಕ್ಕೆ ಆಗಿರುವ ಅನ್ಯಾಯ, ಸಾಲದ ಹೊರೆಯನ್ನು ಜನರಿಗೆ ತಿಳಿಸಬೇಕು. ರಾತರು ಇಂದು ಎಷ್ಟು ಕಷ್ಟದಲ್ಲಿ ಇದ್ದಾರೆ ಎಂದರೆ, ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಆದರೆ ಕೃಷಿ ವೆಚ್ಚ ಹೆಚ್ಚಾಗುತ್ತಿದ್ದು ಆದಾಯ ಕುಸಿಯುತ್ತಿದೆ. ಕಬ್ಬು, ಅಡಿಕೆ, ರಾಗಿ, ಭತ್ತ, ತೊಗರಿ, ಶೇಂಗಾ ಸೇರಿದಂತೆ ಎಲ್ಲ ಬೆಳೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಕರಾಳ ಕಾಯ್ದೆ ಹಿಂಪಡೆದಿದೆ. ಆದರೆ ರಾಜ್ಯದಲ್ಲಿ ಹಿಂಪಡೆದಿಲ್ಲ. ಪರಿಣಾಮ ಎಪಿಎಂಸಿ ನಷ್ಟಕ್ಕೆ ಸಿಲುಕಿ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಎಲ್ಲರೂ ಜಮೀನು ಖರೀದಿಸಬಹುದು ಎಂದು ಮಾಡಿದ್ದಾರೆ. ದೇವರಾಜ ಅರಸು ಸಮಯದಲ್ಲಿ ಉಳುವವನೆ ಭೂಮಿಯ ಒಡೆಯ ಎಂದು ಮಾಡಿದರೆ, ಇವರು ಉಳ್ಳವನೇ ಭೂಮಿಯ ಒಡೆಯ ಎಂದು ಮಾಡಿದ್ದಾರೆ. ಮನಮೋಹನ್ ಸಿಂಗ್ ಕಾಲದಲ್ಲಿ ಅಡುಗೆ ಅನಿಲ ಬೆಲೆ 400 ರೂ. ಇತ್ತು, ಇಂದು 1100 ಆಗಿದೆ. ಇಲ್ಲಿನ ವ್ಯತ್ಯಾಸ ಎಷ್ಟು? ಕಚ್ಛಾತೈಲ ಬೆಲೆ ಹೆಚ್ಚಾಗಿಲ್ಲ ಕಡಿಮೆ ಇದ್ದರೂ ಇಲ್ಲಿ ಬೆಲೆ ಮಾತ್ರ ಹೆಚ್ಚಾಗಿದೆ. 2020ರಿಂದ ಸಬ್ಸಿಡಿ ನಿಲ್ಲಿಸಿದರು.

ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ಯುವಕರಿಗೆ ಉದ್ಯೋಗ ನೀಡಲಿಲ್ಲ. ಸಾಲ ಮನ್ನಾ ಮಾಡಲಿಲ್ಲ. ಮನಮೋಹನ್ ಸಿಂಗ್ ಅವರು 78 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ನಾನು ಸಿಎಂ ಆಗಿದ್ದಾಗ 50 ಸಾವಿರದವರಪೆಗೂ ಪ್ರತಿ ರೈತರ ಸಾಲ ಮನ್ನಾ ಮಾಡಿದ್ದೆ. ಇವರು ಉದ್ದಿಮೆದಾರರ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಹೀಗೆ ದೇಶ ಹಾಗೂ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ.

ಅವರ ಕರ್ಮಕಾಂಡಗಳನ್ನು ಜನರ ಮುಂದೆ ಇಡುತ್ತಿದ್ದೇವೆ. ಕೈ ಜೋಡಿಸಿ ಕರುನಾಡಿಗಾಗಿ. 9537224224 ಈ ಸಂಖ್ಯೆಗೆ ನೀವು ಕರೆ ಮಾಡಿ ಅಭಿಪ್ರಾಯ ತಿಳಿಸಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು