ಬೆಂಗಳೂರು: ನಗರದ 23 ವರ್ಷದ ಮಹಿಳೆಯೊಬ್ಬರು ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸರಸ್ವತಿ ರಮೇಶ್ ಅವರ ಮಾರ್ಗದರ್ಶನದಲ್ಲಿ ವೈದ್ಯರು ಇದೇ 19ರಂದು ಹೆರಿಗೆ ಮಾಡಿಸಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಿದ್ದಾರೆ.
ಮೊದಲು ಜನಿಸಿದ ಗಂಡು ಮಗು 1.5 ಕೆ.ಜಿ ತೂಕ ಇದೆ. 30 ಸೆಕೆಂಡ್ ನಂತರ ಜನಿಸಿದ ಹೆಣ್ಣು ಮಗು 1.7 ಕೆ.ಜಿ ತೂಕವಿದ್ದು, ಮೂರನೇ ಮಗು 3.15 ನಿಮಿಷ ಅಂತರದಲ್ಲಿ ಜನಿಸಿದೆ. ಇದು 1.8 ಕೆ.ಜಿ. ತೂಕವಿದೆ. ಮೂರು ನವಜಾತ ಶಿಶುಗಳು ಜನಿಸಿದ ಕೂಡಲೇ ಅತ್ತಿವೆ. ಹಾಗಾಗಿ, ಇವರಿಗೆ ಯಾವುದೇ ರೀತಿಯ ತೊಂದರೆಯಿಲ್ಲ ಎನ್ನುವುದು ದೃಢಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
‘ಮೂರು ಶಿಶುಗಳೂ ಆರೋಗ್ಯವಾಗಿವೆ. ಈ ರೀತಿಯ ಪ್ರಕರಣ ಅಪರೂಪ. 15 ವರ್ಷಗಳ ಹಿಂದೆ ಡಾ. ಸರಸ್ವತಿ ರಮೇಶ್ ಅವರು ಬಸವನಗುಡಿಯ ಎ.ವಿ. ಆಸ್ಪತ್ರೆಯಲ್ಲಿ ಮೂರು ಶಿಶುಗಳ ಹೆರಿಗೆ ಮಾಡಿಸಿದ್ದರು. ಆ ಮಕ್ಕಳು ಆರೋಗ್ಯವಾಗಿ ಇದ್ದಾರೆ’ ಎಂದು ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸ್ಮೃತಿ ಗೌರಂಗ್ ಪ್ರಕಟಣೆಯಲ್ಲಿ ಹೇಳಿದ್ದಾರೆ.