News Karnataka Kannada
Saturday, May 11 2024
ಬೆಂಗಳೂರು ನಗರ

ಜಯನಗರದ ಯುನೈಟೆಡ್‌ ಆಸ್ಪತ್ರೆಯಲ್ಲಿ ಆಟೋಲೋಗಸ್ ಕಾರ್ಟಿಲೆಜ್ ಕಸಿ ಶಸ್ತ್ರಚಿಕಿತ್ಸೆ

Autologous cartilage transplant surgery at United Hospital, Jayanagar
Photo Credit : News Kannada

ಬೆಂಗಳೂರು,ಜು.23: ಫುಟ್‌ಬಾಲ್‌ ಆಟದಲ್ಲಿ ಪಾದದ ಕಾರ್ಟಿಲೇಜ್‌ ಗೆ ಹಾನಿಮಾಡಿಕೊಂಡಿದ್ದ ಕ್ರೀಡಾಪುಟುವಿಗೆ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಆಟೋಲೋಗಸ್‌ ಕಾರ್ಟಿಲೇಜ್‌ ಕಸಿ ಶಸ್ತ್ರಚಿಕಿತ್ಸೆಯನ್ನ ಜಯನಗರದ ಯುನೈಟೆಡ್‌ ಆಸ್ಪತ್ರೆಯ ವೈದ್ಯರು ನೆರವೇರಿಸಿದ್ದಾರೆ.

ರಾಜ್ಯದಲ್ಲೆ ಪ್ರಪ್ರಥಮ ಬಾರಿಗೆ ನಡೆಸಿದ ಈ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಚಿಕಿತ್ಸೆಯ ಬಗ್ಗೆ ಆಸ್ಪತ್ರೆಯ ವೈದ್ಯರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಇತ್ತೀಚಿಗೆ ಅಜಯ್ ಎಂಬ ಯುವ ಫುಟ್‌ಬಾಲ್ ಆಟಗಾರ ಫುಟ್‌ಬಾಲ್ ಪಂದ್ಯವೊಂದರಲ್ಲಿ ತನ್ನ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಕೀಲುಗಳ ಕಾರ್ಟಿಲೆಜ್ ಸಮಸ್ಯೆಯನ್ನು ಸಾಮಾನ್ಯವಾಗಿ ಯಾವುದೇ ಶಸ್ತ್ರಚಿಕಿತ್ಸೆಗಳಿಲ್ಲದೆ ನಿವಾರಿಸಲಾಗುತ್ತದೆ. ದೀರ್ಘಕಾಲದ ವಿಶ್ರಾಂತಿ ತೆಗೆದುಕೊಳ್ಳುವುದು ಸಾಮಾನ್ಯವಾಗಿ ಭಾರತದಲ್ಲಿ ರೂಢಿಯಲ್ಲಿದೆ. ಆದರೆ ಇದು ಕ್ರೀಡಾಪಟುಗಳು ತಮ್ಮ ಚಟುವಟಿಕೆಗಳಲ್ಲಿ ಮುಂದುವರಿಯುವುದನ್ನು ತಡೆಯುತ್ತದೆ ಹಾಗೂ ನಿಧಾನವಾಗಿ ಚೇತರಿಸಿಕೊಳ್ಳುವ ಮೂಲಕ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಮರಳಿ ಪಡೆದುಕೊಳ್ಳಲು ಬಹಳಷ್ಟು ಸಮಯಾವಕಾಶ ಬೇಡುತ್ತದೆ.

ನೂತನ ವಿಧಾನದ ಶಸ್ತ್ರಚಿಕಿತ್ಸೆಯ ಬಗ್ಗೆ ವಿವರಿಸಿದ ಯುನೈಟೆಡ್‌ ಆಸ್ಪತ್ರೆಯ ಕನ್ಸಲ್ಟೆಂಟ್‌ ಆರ್ಥೋಪಿಡಿಶಿಯನ್‌ ಡಾ ಪ್ರದ್ಯುಮ್ನ ಆರ್‌ ಅವರು “ಅಥ್ಲೆಟಿಕ್ ನಲ್ಲಿ ಪಾಲ್ಗೊಳ್ಳುವ ಮಂದಿಗೆ ಕೀಲಿನ ಕಾರ್ಟಿಲೆಜ್ ಗಾಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ವೃತ್ತಿಪರ ಕ್ರೀಡಾಪಟುಗಳು ಮತ್ತು ಕ್ರೀಡಾ ಹವ್ಯಾಸಿಗಳು ಕಾರ್ಟಿಲೆಜ್ ಹಾನಿಗೆ ಗುರಿಯಾಗುತ್ತಾರೆ. ಇದು ಟ್ವಿಸ್ಟ್ ಮಾಡುವಾಗ, ಜಂಪ್ ಮಾಡುವಾಗ ಜಿಗಿಯುವಾಗ ಮೊಳಕಾಲನ್ನು ತೀವ್ರವಾಗಿ ಬಾಗಿಸಿದಾಗ ಅಥವಾ ಹಠಾತ್ ಆಘಾತಕಾರಿ ಗಾಯದಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದನ್ನು ಗುಣಪಡಿಸುವ ಸೀಮಿತ ಚಿಕಿತ್ಸೆಗಳಿಂದಾಗಿ, ನೋವು ಹೆಚ್ಚಾಗಿರುತ್ತದೆ. ಹೆಚ್ಚಿನ ಬಾರಿ ಇದು ಅಪೂರ್ಣ ಚಿಕಿತ್ಸೆಗೆ ಕಾರಣವಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಕಾರ್ಟಿಲೆಜ್ ಗಾಯಗಳು ಪ್ರೊಗ್ರೆಸ್ಸಿವ್ ಕೊಂಡ್ರೊಜೆನಿಕ್ ನಷ್ಟಕ್ಕೆ ಕಾರಣವಾಗಬಹುದು ಅಥವಾ ಕಾಲಕ್ರಮೇಣ ಕಾರ್ಟಿಲೆಜ್ ಕಳೆದುಹೋಗಬಹುದು” ಎಂದು ಹೇಳಿದರು.

ಕೇವಲ ಕೀಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ರೋಗಿಗೆ ಒಂದೇ ಹಂತದ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಜಯ್ ಈಗ ಗುಣಮುಖವಾಗುವುದರ ಜೊತೆಗೆ ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಹಜ ಸ್ಥಿತಿಗೆ ಕ್ಷೀಪ್ರವಾಗಿ ಮರಳುತ್ತಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ನೆಚ್ಚಿನ ಕ್ರೀಡೆಯನ್ನು ಮತ್ತೆ ಆಡಲು ಸಾಧ್ಯವಾಗುತ್ತದೆ” ಎಂದು ಯುನೈಟೆಡ್‌ ಆಸ್ಪತ್ರೆಯ ಕನ್ಸಲ್ಟೆಂಟ್‌ ಆರ್ಥೋಪಿಡಿಶಿಯನ್‌ ಡಾ ಪ್ರದ್ಯುಮ್ನ ಆರ್‌ ತಿಳಿಸಿದರು.

ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಕ್ರಮ್‌ ಸಿದ್ದಾರೆಡ್ಡಿ ಮಾತನಾಡಿ, “ನೂತನ ವಿಧಾನದ ತಂತ್ರಜ್ಞಾನದಲ್ಲಿ ರೋಗಿಯ ಕೀಲಿನಿಂದ ಸಂಗ್ರಹಿಸಿದ ರೋಗಿಯ ಕಾರ್ಟಿಲೆಜ್ ಕೋಶಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಅಂಗಾಂಶವನ್ನು ರೋಗಿಯ ರಕ್ತದ ಪ್ರೋಟೀನ್ ಸಮೃದ್ಧ ಭಾಗದೊಂದಿಗೆ ಬೆರೆಸಿ ಜೆಲ್ ತರಹದ ವಸ್ತುವನ್ನು ರೂಪಿಸಿಕೊಳ್ಳಲಾಗುತ್ತದೆ. ಇದನ್ನು ನೋವಿರುವ ಜಾಗಗಳಿಗೆ ಹಾಕುವುದರ ಮೂಲಕ ಕೆಲವು ವಾರಗಳಲ್ಲಿ ಹೊಸ ಕಾರ್ಟಿಲೆಜ್ ಆಗಿ ಬೆಳೆಯಲು ಅನುವು ಮಾಡಿಕೊಡಲಾಗುತ್ತದೆ. ಇದರಿಂದ ಕೀಲುಗಳಿಗೆ ಹೆಚ್ಚಿನ ಹಾನಿಯಾಗುವುದನ್ನು ತಡೆಯಬಹುದು ಮತ್ತು ಕೀಲುಗಳಲ್ಲಿ ಸಂಧಿವಾತ ಹೆಚ್ಚುವುದನ್ನು ತಪ್ಪಿಸುತ್ತದೆ ಎಂದರು.

“COVID ಸಾಂಕ್ರಾಮಿಕ ರೋಗದ ನಂತರ ತಮ್ಮ ಕ್ರೀಡಾ ಚಟುವಟಿಕೆಗಳಿಗೆ ಮತ್ತೆ ಮರಳಿರುವ ಹೆಚ್ಚಿನ ಮಂದಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯುನೈಟೆಡ್ ಹಾಸ್ಪಿಟಲ್ ಬೆಂಗಳೂರಿನಲ್ಲಿ ಮೂಲಸೌಕರ್ಯ, ಉಪಕರಣಗಳು, ಆಪರೇಷನ್ ಥಿಯೇಟರ್‌ಗಳು, ತರಬೇತಿ ಪಡೆದ ಸಿಬ್ಬಂದಿ, ರೋಗಿಗಳ ಯೋಗಕ್ಷೇಮಕ್ಕೆ ಮೀಸಲಾದ ನಿರ್ವಹಣೆ ಮತ್ತು ಭಾರತದ ಮೊದಲ ಆಟೋಲೋಗಸ್ ಕಾರ್ಟಿಲೆಜ್ ಟ್ರಾನ್ಸ್‌ಪ್ಲಾಂಟ್‌ ಸೌಲಭ್ಯಗಳ ಮೂಲಕ ಬೆಂಗಳೂರಿನ ಅತ್ಯುತ್ತಮ ಕ್ರೀಡೆ ಸಂಬಂಧಿತ ಗಾಯಗಳಿಗೆ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆಗಳಲ್ಲಿ ಒಂದಾಗಿದೆ. ಕ್ರೀಡಾ ಸಮಸ್ಯೆಗಳ ನಿವಾರಣೆಗೆ ಇದೊಂದು ಉತ್ತಮವಾದ ಸ್ಥಳ” ಎಂದು ಜಯನಗರದ ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಡಯಾಗ್ನೋಸ್ಟಿಕ್ ಮತ್ತು ವೆಲ್ನೆಸ್ ಮುಖ್ಯಸ್ಥ ಡಾ. ಶಾಂತಕುಮಾರ್ ಮುರುಡಾ ಹೇಳಿದರು.

“ಯುನೈಟೆಡ್ ಆಸ್ಪತ್ರೆಯಲ್ಲಿ ಎಲ್ಲಾ ಕ್ರೀಡೆಗಳಿಗೆ ಸಂಬಂಧಿಸಿದ ಗಾಯಗಳಿಗೆ ಚಿಕಿತ್ಸೆ ನೀಡಲು ವಿಶ್ವದ ಅತ್ಯುತ್ತಮ ತಂತ್ರಗಳನ್ನು ಬಳಸಲಾಗುತ್ತದೆ. ಆಟೋಲೋಗಸ್ ಕಾರ್ಟಿಲೆಜ್ ಟ್ರಾನ್ಸ್‌ಪ್ಲಾಂಟ್ ಅನ್ನು ಒಂದೇ ಸೆಟ್ಟಿಂಗ್‌ನಲ್ಲಿ ಮಾಡಲಾಗುತ್ತದೆ, ಕೀಹೋಲ್ ಶಸ್ತ್ರಚಿಕಿತ್ಸೆ, ಸಾಂಪ್ರದಾಯಿಕ ಆರು ವಾರಗಳ ಅಂತರದಲ್ಲಿ ನಡೆಯುವ ಎರಡು ACI ಗಿಂತ ಕಡಿಮೆ ವೆಚ್ಚದಾಯಕವಾಗಿದೆ ಮತ್ತು ರೋಗಿಗೆ ಅನುಕೂಲಕರವಾಗಿದೆ” ಎಂದು ಡಾ ಮುರುಡಾ ವಿವರಿಸಿದರು.

ಹಲವಾರು ವೈದ್ಯರನ್ನು ಭೇಟಿ ಮಾಡಿದ ಬಳಿಕ ಯುನೈಟೆಡ್ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋಪೆಡಿಶಿಯನ್ ಡಾ.ಪ್ರದ್ಯುಮ್ನ ಅವರನ್ನು ಭೇಟಿಯಾದೆ. ನನ್ನ ಪಾದದ ಕಾರ್ಟಿಲೇಜ್ ಹಾನಿಗೊಳಗಾಗಿದ್ದನ್ನ ಕಂಡು ವೈದ್ಯರಾದ ಪ್ರದ್ಯುಮ್ನ ಅವರು ಆರ್ಥೋಸ್ಕೊಪಿ ಮೂಲಕ ಆಟೋಲೋಗಸ್ ಕಾರ್ಟಿಲೆಜ್ ಕಸಿ ಮಾಡಲು ನಿರ್ಧರಿಸಿದರು. ಕಡಿಮೆ ಇನ್ ವೇಸಿವ್ ಸರ್ಜರಿ (ಕೀಹೋಲ್) ಮೂಲಕ ಹಾನಿಗೊಳಗಾದ ಕಾರ್ಟಿಲೆಜ್ ಗೆ ಚಿಕಿತ್ಸೆ ನೀಡಲು ನಿರ್ಧರಿಸಿದರು. ಇದರಿಂದ ಒಂದೇ ಶಸ್ತ್ರಚಿಕಿತ್ಸೆಯ ಮೂಲಕ ನನ್ನ ಗಾಯಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಶಸ್ತ್ರಚಿಕಿತ್ಸೆಗೆ ಒಳಪಟ್ಟ ಕ್ರೀಡಾಪಟು ಅಜಯ್‌ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು