News Karnataka Kannada
Friday, May 10 2024
ಬೆಂಗಳೂರು ನಗರ

ಬೆಂಗಳೂರು ಟೆಕ್ ಸಂಸ್ಥೆಯ ಸಿಇಒ, ಎಂಡಿ ಕೊಲೆ ಪ್ರಕರಣ: 3 ಮಂದಿ ಬಂಧನ

3 arrested in murder case of B'luru tech firm CEO, MD
Photo Credit : IANS

ಬೆಂಗಳೂರು, ಜು.12: ಬೆಂಗಳೂರು ಮೂಲದ ಟೆಕ್ ಸಂಸ್ಥೆಯೊಂದರ ಎಂಡಿ ಮತ್ತು ಸಿಇಒ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಕರ್ನಾಟಕ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಎರೋನಿಕ್ಸ್ ಮೀಡಿಯಾ ಪ್ರೈವೇಟ್ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನು ಕುಮಾರ್ ಅವರನ್ನು ನಗರದ ಅಮೃತಳ್ಳಿ ಬಡಾವಣೆಯಲ್ಲಿ ಮಂಗಳವಾರ ಹಾಡಹಗಲೇ ಕಡಿದು ಹತ್ಯೆ ಮಾಡಲಾಗಿತ್ತು.

ಕತ್ತಿಯಿಂದ ಹಲ್ಲೆಗೊಳಗಾದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿಗಳಾದ ಜೆ.ಫೆಲಿಕ್ಸ್, ವಿನಯ್ ರೆಡ್ಡಿ ಮತ್ತು ಶಿವು ಎಂಬುವವರನ್ನು ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಣೀಂದ್ರ ಯಾವಾಗಲೂ ಫೆಲಿಕ್ಸ್‌ಗೆ ಅವಮಾನ ಮಾಡುತ್ತಿದ್ದರು ಮತ್ತು ಕೆಲಸದಿಂದ ವಜಾಗೊಳಿಸಿದ್ದರು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

ಫೆಲಿಕ್ಸ್  ಫಣೀಂದ್ರನನ್ನು ಕೊಲ್ಲಲು ನಿರ್ಧರಿಸಿದ್ದನು. ಅದರ ನಂತರ ಇತರ ಇಬ್ಬರು ಆರೋಪಿಗಳು ಸೇರಿ ಕೂಟ ರಚಿಸಿ  ಕೊಲೆಗೆ ಸ್ಕೆಚ್‌ ಹಾಕಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು