ಬೆಂಗಳೂರು : ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ.100ರಷ್ಟು ವಯಸ್ಕರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಿದಂತ ಗುರಿಯನ್ನು ಮುಟ್ಟಿ ಹೊಸ ದಾಖಲೆಯನ್ನು ಬರೆದಿತ್ತು. ಈ ಬಳಿಕ 15-17 ವರ್ಷದ ಮಕ್ಕಳಿಗೆ ಶೇ.100ರಷ್ಟು ಲಸಿಕೆ ನೀಡಿಕೆಯ ಗುರಿಯನ್ನು ಗದಗ ಜಿಲ್ಲೆ ತಲುಪಿ, ಹೊಸ ದಾಖಲೆಯನ್ನು ಬರೆದಿದೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಗದಗ ಜಿಲ್ಲೆಯಲ್ಲಿ 15-17 ವರ್ಷದ ಮಕ್ಕಳಿಗೆ ಶೇ.100ರಷ್ಟು ಲಸಿಕೆಯ ಗುರಿಯನ್ನು ಸಾಧಿಸಲಾಗಿದೆ. ಕರ್ನಾಟಕ ಮಕ್ಕಳಿಗೆ ಲಸಿಕೆ ನೀಡಿಕೆಯಲ್ಲಿ ಶೇ.72ರಷ್ಟು ಗುರಿಯನ್ನು ತಲುಪಿದೆ ಎಂದು ತಿಳಿಸಿದ್ದಾರೆ.
Gadag becomes the first district in Karnataka to achieve 1️⃣0️⃣0️⃣% FIRST dose coverage among 15-17 year children.
Overall first dose coverage among children in Karnataka is 72%.#COVID19 #vaccination #Karnataka pic.twitter.com/s677e3K162
— Dr Sudhakar K (@mla_sudhakar) February 3, 2022