ಲಂಡನ್: ಪಶ್ಚಿಮ ಲಂಡನ್ನ ಈಲಿಂಗ್ ಕೌನ್ಸಿಲ್ನ ಮೇಯರ್ ಆಗಿ ಭಾರತೀಯ ಮೂಲದ ಮೊಹಿಂದರ್ ಕೆ.ಮಿಧಾ ಆಯ್ಕೆಯಾಗಿದ್ದಾರೆ.
ಬ್ರಿಟಿಷ್ ವಿರೋಧ ಪಕ್ಷದ ಲೇಬರ್ ಪಕ್ಷದ ಸದಸ್ಯರಾಗಿದ್ದ ಮಿಧಾ ಅವರು ಈ ಹುದ್ದೆಯನ್ನು ಅಲಂಕರಿಸಿದ ಭಾರತೀಯ ಮೂಲದ ಮೊದಲ ಮಹಿಳೆಯಾಗಿದ್ದಾರೆ. ಮಿಧಾ ಒಂದು ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಬ್ರಿಟನ್ನಲ್ಲಿರುವ ಹಲವು ಭಾರತೀಯ ಸಮುದಾಯಗಳು ಮಿಧಾ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಲೇಬರ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಜನರ ಜೀವನ ಸುಧಾರಣಾ ಕ್ರಮಗಳು, ಸಾಂಕ್ರಾಮಿಕ ರೋಗದ ನಿಯಂತ್ರಣ, ಹಿಂಸಾತ್ಮಕ ಅಪರಾಧ ಮತ್ತು ಸಮಾಜವಿರೋಧಿ ನಡವಳಿಕೆಯ ವಿರುದ್ಧ ಹೋರಾಡುವುದು, ಸಾಮಾಜಿಕ ಕಳಕಳಿ, ಪ್ರಾಮಾಣಿಕವಾಗಿ ಕೈಗೆಟಕುವ ಬೆಲೆಯ ಮನೆಗಳನ್ನು ಜನರಿಗೆ ವಿತರಿಸುವುದಾಗಿ ತಿಳಿಸಿದ್ದಾರೆ.