ಬೆಂಗಳೂರು: ಕಳೆದ ನಾಲ್ಕೈದು ತಿಂಗಳಿನಿಂದ ಓಲಾ ಹಾಗೂ ಊಬರ್ ಸಂಸ್ಥೆಗಳು ನಡೆಸುತ್ತಿದ್ದ ಆ್ಯಪ್ ಆಧಾರಿತ ಟ್ಯಾಕ್ಸಿ ಶೇರಿಂಗ್ ವ್ಯವಸ್ಥೆಯು ಸಾರಿಗೆ ಇಲಾಖೆಯ ನಿಯಮಕ್ಕೆ ವಿರುದ್ಧವಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ಎಂ.ಕೆ. ಅಯ್ಯಪ್ಪ ತಿಳಿಸಿದ್ದು, ಸಿಟಿ ಟ್ಯಾಕ್ಸಿಗಳ ಶೇರಿಂಗ್ ಸೇವೆಗೆ ನಿಷೇಧ ಹೇರಿದ್ದಾಗಿ ತಿಳಿಸಿದ್ದಾರೆ.
ಟ್ಯಾಕ್ಸಿ ಶೇರಿಂಗ್ ಸೇವೆಯನ್ನು ಬೆಂಗಳೂರಿನ ವಿವಿಧ ಸ್ಥಳಗಳಿಂದ ಪಿಕ್ಅಪ್, ಡ್ರಾಪ್ ಮಾಡುತ್ತಿದ್ದವು. ಮಾರ್ಗದ ಮಧ್ಯೆ ಯಾವುದೇ ವ್ಯಕ್ತಿ ಒಂದು ಕಾರನ್ನು ಇನ್ನೊಬ್ಬರೊಂದಿಗೆ ಶೇರ್ ಮಾಡಿಕೊಳ್ಳುವ ಅವಕಾಶ ಇದರಲ್ಲಿತ್ತು. ಶೇರಿಂಗ್ ವ್ಯವಸ್ಥೆಯಿಂದ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಎದುರಾಗಿತ್ತು. ಹಾಗಾಗಿ ಮಹಿಳೆಯರ ಸುರಕ್ಷತೆ ನಮ್ಮ ಕರ್ತವ್ಯವೆಂದು ಅಯ್ಯಪ್ಪ ಹೇಳಿದ್ದಾರೆ.