ಬೆಂಗಳೂರು: ಸಂವಿಧಾನದ ಶೆಡ್ಯೂಲ್ 10ರ ಅಡಿಯಲ್ಲಿ ವಿಪ್ ಜಾರಿಗೊಳಿಸುವ ಸಂಪೂರ್ಣ ಅಧಿಕಾರ ಶಾಸಕಾಂಗ ನಾಯಕರು ಹೊಂದಿರುತ್ತಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ವಿಧಾನಸಭಾ ಕಲಾಪದ ರೂಲಿಂಗ್ ನಲ್ಲಿ ಹೊರಡಿಸಿದ್ದಾರೆ.
ಸದನದಲ್ಲಿ ಭಾಗವಹಿಸುವಂತೆ ತಮ್ಮ ಶಾಸಕರಿಗತೆ ವಿಪ್ ಜಾರಿಗೊಳಿಸುವ ಅಧಿಕಾರ ಶಾಸಕಾಂಗ ಪಕ್ಷದ ನಾಯಕರಿಗಿದೆ. ಇದನ್ನು ಸಂವವಿಧಾನದ ಶೆಡ್ಯೂಲ್ 10ರಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಜವಾಬ್ದಾರಿಯನ್ನು ಮೊಟಕುಗೊಳಿಸುವುದಿಲ್ಲ ಎಂದು ಹೇಳುವ ಮೂಲಕ ಎಲ್ಲ ಶಾಸಕರಿಗೂ ವಿಪ್ ಜಾರಿಗೊಳಿಸಬಹುದು ಎಂದು ಹೇಳಿದರು. ಸುಪ್ರೀಂ ಕೋರ್ಟ್ ಆದೇಶವನ್ನು ಪರಿಶೀಲಿಸಿ ನಾಮತಯ್ತು ಇವತ್ತು ಆದೇಶವನ್ನು ಹೊರಡಿಸುತ್ತೇನೆ ಎಂದರು.