News Karnataka Kannada
Friday, May 17 2024
ಬೆಂಗಳೂರು ನಗರ

ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಪಠ್ಯಕ್ರಮ ಸಿದ್ಧಪಡಿಸಲು 26 ತಂಡ ರಚನೆ

Photo Credit :

ಬೆಂಗಳೂರು:  ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ 2022 -23ನೇ ಶೈಕ್ಷಣಿಕ ಸಾಲಿನಿಂದ ಶಾಲಾ ಹಂತದಲ್ಲಿ ಮುಂದಾಗಿದ್ದು, ಇದಕ್ಕೆ ಪೂರಕವಾದ ಪಠ್ಯಕ್ರಮಗಳನ್ನು ಸಿದ್ಧಪಡಿಸಲು 26 ತಂಡಗಳನ್ನು ರಚಿಸಲಾಗಿದೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಶಾಲಾ ಶಿಕ್ಷಣದಲ್ಲಿ ಪೂರ್ವ ಬಾಲ್ಯ ವ್ಯವಸ್ಥೆ ಮತ್ತು ಬುನಾದಿ ಸಾಮರ್ಥ್ಯ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಹಂತ, ಶಿಕ್ಷಕರ ಶಿಕ್ಷಣ, ವಯಸ್ಕರ ಶಿಕ್ಷಣ ಈ ನಾಲ್ಕು ವಿಷಯಗಳಲ್ಲಿ ಪಠ್ಯಕ್ರಮವನ್ನು ರೂಪಿಸಲಾಗುವುದು.

ಪಠ್ಯಕ್ರಮ ರಚನೆಗಾಗಿ 4 ಚಾಲನಾ ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿಗಳ ಅಗತ್ಯತೆಗೆ ಅನುಗುಣವಾಗಿ ಉಪ ಸಮಿತಿಗಳನ್ನು ರಚಿಸಿ ಪಠ್ಯಕ್ರಮ ರಚನೆ ಕಾರ್ಯನಿರ್ವಹಿಸುವುದು ಸಮಿತಿಯ ಕೆಲಸವಾಗಿದೆ.

ಶಾಲಾ ಶಿಕ್ಷಣ, ವಯಸ್ಕರ ಶಿಕ್ಷಣ ಪಠ್ಯಕ್ರಮ ರಚನೆಯ ಬಳಿಕ ಶಿಕ್ಷಕರ ಶಿಕ್ಷಣ ಪಠ್ಯಕ್ರಮ ರಚನೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದ್ದು, ಪ್ರತಿ ಸಮಿತಿಯಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳು ಇರುತ್ತಾರೆ. ನೂತನ ಶಿಕ್ಷಣ ನೀತಿಯಡಿ ಶಾಲೆ ಪಠ್ಯಕ್ರಮ ತಯಾರಿಗಾಗಿ 26 ಫೋಕಸ್ ಗ್ರೂಪ್ ಗಳನ್ನು ರಚಿಸಲಾಗಿದೆ ಎಂದು ಹೇಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು