ಬೆಂಗಳೂರು: ರಾಮ್ರಾಜ್ ಕಾಟನ್ ಪ್ರಕಟಣೆಯಲ್ಲಿ ಖ್ಯಾತ ನಟ ಯಶ್ ಅವರನ್ನು ತನ್ನ ಬ್ರ್ಯಾಂಡ್ ರಾಯಭಾರಿಯಾಗಿ ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಯಶ್ ಅವರು ನಟನೆ ಮತ್ತು ಲೋಕೋಪಕಾರಿ ಕೆಲಸಗಳ ಮೂಲಕ ತಮ್ಮ ಸುತ್ತಲಿನ ಜನರನ್ನು ನಿರಂತರವಾಗಿ ಪ್ರೇರೇಪಿಸುತ್ತಿದ್ದಾರೆ ಹೀಗಾಗಿ ಅವರನ್ನು ಬ್ರ್ಯಾಂಡ್ ರಾಯಭಾರಿ ಆಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ರಾಕಿಂಗ್ ಸ್ಟಾರ್ ಯಶ್ ಅವರನ್ನು ಬ್ರ್ಯಾಂಡ್ ರಾಯಭಾರಿ ಆಗಿ ಹೊಂದುವುದು ರಾಮ್ರಾಜ್ಗೆ ಹೆಮ್ಮೆಯ ಸಂಗತಿ. ಅವರು ಕಠಿಣ ಶ್ರಮದಿಂದಲೇ ತಮ್ಮ ಕನಸುಗಳನ್ನು ನನಸಾಗಿಸಿಕೊಂಡಿದ್ದು, ಸಮಾಜಕ್ಕೆ ದೊಡ್ಡ ಮಟ್ಟದಲ್ಲಿ ಕೊಡುಗೆಯನ್ನೂ ನೀಡುತ್ತಿದ್ದಾರೆ. ಯಶ್ ಅವರೊಂದಿಗೆ ಭಾರತದ ಫ್ಯಾಷನ್ ಜಗತ್ತಿನಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಲಿದ್ದೇವೆ ಎಂದು ಪ್ರಕಟಣೆಯಲ್ಲಿ ಹೇಳಿದೆ.