ರಾಜ್ಯದಲ್ಲಿ ಕೋವಿಡ್ 19 ಸೋಂಕು ಹರಡುವಿಕೆಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದು ರಾತ್ರಿಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ( Weekend Curfew ) ಜಾರಿಗೊಳ್ಳಲಿದೆ.
ರಾಜ್ಯದಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ವಾರಾಂತ್ಯದ ಕರ್ಫ್ಯೂ ( Curfew ) ಆದೇಶದ ಇರುವವರೆಗೂ ನಡೆಸಬಾರದು. ಎಂದು ಅಂಗನವಾಡಿ ಕಾರ್ಯಕರ್ತೆಯ ಹಾಗೂ ಮೇಲ್ವಿಚಾರಕಿಯರು ಎಲ್ಲಾ ಪಾಲಕರಿಗೆ ತಿಳುವಳಿಕೆ ನೀಡಿ, ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.