ರಾಜ್ಯದಲ್ಲಿ ಇಂದು 628 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 15 ಮಂದಿ ಬಲಿಯಾಗಿದ್ದಾರೆ . ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು,ಬೆಂಗಳೂರಿನಲ್ಲಿ 346 ಮಂದಿ ಸೇರಿದಂತೆ ಕರ್ನಾಟಕದಲ್ಲಿ 628 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಈ ಮೂಲಕ ಪಾಸಿಟಿವಿಟಿ ದರ 0.92 % ಕುಸಿತ ಕಂಡಿದೆ. ರಾಜ್ಯದಲ್ಲಿ 7518 ಸಕ್ರಿಯ ಪ್ರಕರಣಗಳಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.