ಬೆಂಗಳೂರು: ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಎರಡನೇ ದಿನದಂದು ಸುಮಾರು 197 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದ್ದು, ಇದು ಹಿಂದಿನೆಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಅಬಕಾರಿ ಇಲಾಖೆಯು ತಿಳಿಸಿದೆ.
ಮೊದಲ ದಿನದಂದು 45 ಕೋಟಿ ರೂಪಾಯಿ ಮದ್ಯ ಮಾರಾಟವಾಗಿತ್ತು. ಸುಮಾರು 7.02 ಲಕ್ಷ ಲೀಟರ್ ಬಿಯರ್, 36.37 ಲಕ್ಷ ರೂಪಾಯಿ ಇತರೆ ಮದ್ಯ ಮಾರಾಟವಾಗಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.
ಸರಾಸರಿಯಾಗಿ 75 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ 197 ಕೋಟಿ ರೂಪಾಯಿ ಮದ್ಯ ಮಾರಾಟ ಒಂದು ಇತಿಹಾಸವಾಗಿದೆ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.