ಬೆಂಗಳೂರು: ಭೂಗತ ಪಾತಕಿ ಮಂಗಳೂರಿನ ರವಿ ಪೂಜಾರಿಯನ್ನು ಇಂಟರ್ ಪೋಲ್ ಪೊಲೀಸರು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬುಧವಾರ ಬಂಧಿಸಿದ್ದಾರೆ.
15ವರ್ಷಗಳಿಂದ ತಲೆಮರೆಸಿಕೊಂಡು ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳದ ಉದ್ಯಮಿಗಳಿಗೆ ಸೇರಿದಂತೆ ನಟರಿಗೆ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುತ್ತಿದ್ದ. ಈತನ ವಿರುದ್ಧ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ತಲೆಮರೆಸಿಕೊಂಡು ಓಡಾಡುತ್ತಿದ್ದ ರವಿ ಬಂಧನಕ್ಕೆ ಪೊಲೀಸರ ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ರಾಜ್ಯದ ಗುಪ್ತಚರ ವಿಭಾಗ ಮಾಹಿತಿ ಆಧರಿಸಿ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ರವಿ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದಾರೆ. ಸೆನೆಗಲ್ ವಿಮಾನ ನಿಲ್ದಾಣಕ್ಕೆ ಬುಧವಾರ ಬಂದಿಳಿದಿದ್ದ ರವಿ ಪೂಜಾರಿಯನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಇಂಟರ್ ಪೋಲ್ ಪೊಲೀಸರು ಬಂಧಿಸಿದ್ದಾರೆ.