ಬೆಂಗಳೂರು:ಬೆಂಗಳೂರು ನಗರ ಜಿಲ್ಲೆಯು ಕೋವಿಡ್ ಲಸಿಕೆಯ ಎರಡನೇ ಡೋಸ್ ನ್ನು ಶೇಕಡಾ ನೂರರಷ್ಟು ಕವರೇಜ್ ಸಾಧಿಸಿದೆ.ಈ ಬಗ್ಗೆ ಆರೋಗ್ಯ ಸಚಿವ ಕೆ ಸುಧಾಕರ್ ಟ್ವೀಟ್ ಮಾಡಿ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಮೂಲಕ ಬೆಂಗಳೂರು ನಗರ ಜಿಲ್ಲೆಯು ಶೇಕಡಾ ನೂರರಷ್ಟು ಲಸಿಕೆ ಪೂರ್ಣಗೊಳಿಸಿದ ರಾಜ್ಯದ ಪ್ರಥಮ ಜಿಲ್ಲೆಯಾಗಿದೆ.
‘ಬೆಂಗಳೂರು ನಗರ ( ಬಿಬಿಎಮ್ ಪಿ ಹೊರತುಪಡಿಸಿ) 100% ಸೆಕೆಂಡ್ ಡೋಸ್ ಕವರೇಜ್ ಸಾಧಿಸಲು ಕರ್ನಾಟಕದ ಮೊದಲ ಜಿಲ್ಲೆಯಾಗಿದೆ! ಈ ಅದ್ಭುತ ಸಾಧನೆಗಾಗಿ ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳು! ‘ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.