ಬೆಂಗಳೂರು : ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದಲ್ಲಿ ನಾಲ್ವರು ರಾಷ್ಟ್ರೀಯ ಮಟ್ಟದ ಈಜುಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಜಯನಗರ ಪೊಲೀಸರು.
ಆ ನರ್ಸ್ ನೀಡಿದ ದೂರಿನ ಪ್ರಕಾರ, ಅವಳು ರಜತ್ನ ಕೋಣೆಗೆ ಹೋದ ನಂತರ, ರಾಷ್ಟ್ರೀಯ ಮಟ್ಟದ ಈಜುಗಾರರಾಗಿದ್ದ ನಾಲ್ವರು ಯುವಕರು ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಎಲ್ಲಾ ನಾಲ್ವರು ಆರೋಪಿಗಳು 20 ವರ್ಷದ ಆಸುಪಾಸಿನವರಾಗಿದ್ದು, ಆರೋಪಿಗಳನ್ನು ದೆಹಲಿ ಮೂಲದ ರಜತ್, ಶಿವ ರಾಣಾ, ದೇವ್ ಸರೋಹ ಮತ್ತು ಯೋಗೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನಲ್ಲಿ ಸ್ವಿಮ್ಮಿಂಗ್ ತರಬೇತಿ ಪಡೆಯುತ್ತಿದ್ದರು.
ರಜತ್ ಬೆಂಗಳೂರಿನಿಂದ ಪರಾರಿಯಾಗಲು ಯತ್ನಿಸಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಯನ್ನು ಬಸವನಗುಡಿ ಬಳಿ ಬಂಧಿಸಲಾಗಿದ್ದು, ಇನ್ನಿಬ್ಬರನ್ನು ಚಿಕ್ಕಪೇಟೆ ಬಳಿ ಬಂಧಿಸಲಾಗಿದೆ.