News Karnataka Kannada
Thursday, May 09 2024
ಬೆಂಗಳೂರು ನಗರ

ಇಂದು ಬೆಂಗಳೂರಿನಲ್ಲಿ 24,748 ಮಂದಿಗೆ ಕೊರೊನಾ ಸೋಂಕು ದೃಢ

2,797 people tested positive for coronavirus in the last 24 hours in the country.
Photo Credit : IANS

ಬೆಂಗಳೂರು, ಜ.22 :  ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಇಳಿಕೆಯಾಗುತ್ತಿದೆ. ಕಳೆದೆರಡು ದಿನಗಳ ಹಿಂದೆ 27 ಸಾವಿರ ಗಡಿ ದಾಟಿದ್ದ ಸೋಂಕಿತರ ಪ್ರಮಾಣ ನಿನ್ನೆ 26,790ಕ್ಕೆ ಇಳಿಕೆಯಾಗಿತ್ತು. ಇಂದು 24,748ಕ್ಕೆ ಬಂದು ನಿಂತಿದೆ. ನಿನ್ನೆಗಿಂತ ಇಂದು 2 ಸಾವಿರ ಪ್ರಕರಣಗಳು ಕಡಿಮೆ ದಾಖಲಾಗಿವೆ.

ಬೊಮ್ಮನಹಳ್ಳಿ ವಲಯದಲ್ಲಿ 2824, ದಾಸರಹಳ್ಳಿ 639, ಬೆಂಗಳೂರು ಪೂರ್ವ 3714, ಮಹದೇವಪುರ 3983, ಆರ್‌ಆರ್ ನಗರ 1497, ದಕ್ಷಿಣ ವಲಯ 3139, ಪಶ್ಚಿಮ 1842, ಯಲಹಂಕ 1254, ಆನೇಕಲ್ 1857, ಬೆಂಗಳೂರು ವಲಯದಲ್ಲಿ 1984 ಪ್ರಕರಣಗಳು ಸೇರಿ ಒಟ್ಟು 24,748 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯಾದ್ಯಂತ 45 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪ್ರತಿದಿನ ಪತ್ತೆಯಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲೇ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.

ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿವೆ. ವೀಕೆಂಡ್, ನೈಟ್ಕಫ್ರ್ಯೂವನ್ನು ಸರ್ಕಾರ ವಿಸಿತ್ತು. ಆದರೆ, ನಿನ್ನೆ ವೀಕೆಂಡ್ ಕಫ್ರ್ಯೂ ರದ್ದುಗೊಳಿಸಿದೆ. ಕೊರೊನಾ ಕಟ್ಟಿಹಾಕಲು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು