ಬೆಂಗಳೂರು: 6 ವರ್ಷದ ಬಾಲಕನ ಮೇಲೆ ಪಿಲ್ಲರ್ ಮೇಲಿದ್ದ ಕಲ್ಲು ಬಿದ್ದ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಲಾಲ್ಬಾಗ್ನಲ್ಲಿ ಉದ್ಯಾನವನದಲ್ಲಿ ನಿನ್ನೆ ಸುಮಾರು 2.45 ರಹೊತ್ತಿಗೆ ನಡೆದಿದೆ.
6 ವರ್ಷದ ವಿಕ್ರಮ್ ತನ್ನ ತಂದೆ ಕುಮಾರ್ ಮತ್ತು ತಾಯಿ ರೇವತಿ ಜೊತೆ ಲಾಲ್ಬಾಗ್ನ ಉದ್ಯಾನವನಕ್ಕೆ ಬಂದಿದ್ದು, ಪಿಲ್ಲರ್ ಪಕ್ಕ ಬಾಲಕನನ್ನು ನಿಲ್ಲಿಸಿ ಫೋಟೋ ತೆಗೆಯುವಾಗ ಬಾಲಕನ ಮೇಲೆ ಪಿಲ್ಲರ್ ಕಲ್ಲು ಬಿದ್ದು, ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.