News Karnataka Kannada
Saturday, May 11 2024
ಬೆಂಗಳೂರು ನಗರ

ನಾಲ್ಕು ವರ್ಷಗಳ ಹಿಂದೆ ಟೆಂಪೋ ಹರಿಸಿ ಮಹಿಳೆಯ ಸಾವಿಗೆ ಕಾರಣವಾಗಿದ್ದ ಚಾಲಕನಿಗೆ ಶಿಕ್ಷೆ

Arrest
Photo Credit :

ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಟೆಂಪೋ ಹರಿಸಿ ಮಹಿಳೆಯ ಸಾವಿಗೆ ಕಾರಣವಾಗಿದ್ದ ಟಂಪೋ ಚಾಲಕ ಮತ್ತು ಮಾಲೀ‌ಕಗೆ ಕೋರ್ಟ್‌ ದಂಡ ಹಾಗೂ ಶಿಕ್ಷೆ ವಿಧಿಸಿ ಆದೇಶಿಸಿದೆ.

ರಾಜಾಜಿನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2018ರ ಜನವರಿ 5ರಂದು ಅಯ್ಯಪ್ಪ ಬೇಕರಿ ಸ್ವೀಟ್ಸ್‌ ಆಯಂಡ್‌ ಚಾಟ್ಸ್‌, ಸರ್ವೀಸ್‌ ರಸ್ತೆಯ ನಂದಿನಿ ಲೇಔಟ್‌ ಬಳಿ ಚಾಲಕ ಮಂಜು ಅತೀ ವೇಗವಾಗಿ ಗೊರಗುಂಟೆಪಾಳ್ಯಯಿಂದ ಸುಮ್ಮನಹಳ್ಳಿ ಜಂಕ್ಷನ್‌ ಕಡೆಗೆ ಟೆಂಪೋ ಚಲಾಯಿಸಿಕೊಂಡು ಹೋಗುತ್ತಿದ್ದ. ಆಗ ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಟೆಂಪೋ ಮುಂದಿನ ಎರಡು ಚಕ್ರಗಳು ಮಹಿಳೆ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು.

ಟೆಂಪೋ ಚಾಲಕ ಮಂಜು (27)ಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 5,500 ರೂ.ದಂಡ ಮತ್ತು ಮಾಲಿಕ ಅನಿಲ್‌ (39)ಗೆ ಏಳು ಸಾವಿರ ದಂಡ ವಿಧಿಸಲಾಗಿದೆ.

ಟೆಂಪೋ ಚಾಲಕ ಮತ್ತು ಮಾಲಿಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ರಾಜಾಜಿನಗರ ಸಂಚಾರಿ ಠಾಣೆ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾ ರೋಪಪಟ್ಟಿ ಸಲ್ಲಿಸಿದ್ದರು. ಇದೀಗ ವಿಚಾರಣೆ ಮುಕ್ತಾಯಗೊಳಿಸಿರುವ ಕೋರ್ಟ್‌ ಆರೋಪಿಗೆ ಚಾಲಕನಿಗೆ ಶಿಕ್ಷೆ, ದಂಡ ಹಾಗೂ ಟೆಂಪೋ ಮಾಲಿಕನಿಗೆ 7 ಸಾವಿರ ರೂ. ದಂಡ ವಿಧಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು