ದೌರ್ಜನ್ಯ ನಿರ್ಮೂಲನೆಗೆ ಆದ್ಯತೆ: ಡಾ. ಜಿ. ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ನನ್ನ ಆದ್ಯತೆ. ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರ ಅಗತ್ಯ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.

ನಗರದ ಪೊಲೀಸ್ ಮಹಾನಿರ್ದೇಶಕರವರ ಕಚೇರಿಯಲ್ಲಿ  ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು ರಾಜ್ಯದಲ್ಲಿ ಶೇ 16 ರಷ್ಟು ಅಲ್ಪಸಂಖ್ಯಾತರಿದ್ದರೆ ಅದರಲ್ಲಿ ಶೇ 13 ರಷ್ಟು ಮುಸ್ಲಿಂರು, ಶೇ. 2 ರಷ್ಟು ಕ್ರಿಶ್ಚಿಯ್ನನ್ನರು  ಶೇ 1 ರಷ್ಟು ಸಿಖ್ ಹಾಗೂ ಜೈನರು ಇದ್ದಾರೆ. ಈವರೆಲ್ಲರೂ ಶಾಂತಿಯುತವಾಗಿ ಹಾಗೂ ನೆಮ್ಮದಿಯಾಗಿ ಜೀವನ ನಡೆಸಲು ಅವಕಾಶ ಮಾಡಿಕೊಡುವುದು ಗೃಹ ಇಲಾಖೆ ಕರ್ತವ್ಯ ಎಂದರು.

ಮಂಗಳೂರು ಹಾಗೂ ಬೆಳಗಾವಿ ವಿಭಾಗಗಳಲ್ಲಿ  ಶಾಂತಿ ಕದಡುವ, ಅನಾವಶ್ಯಕವಾಗಿ ಸಮಾಜವನ್ನು ಒಡೆಯುವ  ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಪಾತ್ರ ಬಹಳ ಮುಖ್ಯವೆಂದು ಅವರು ಅಭಿಪ್ರಾಯಪಟ್ಟರು.  

ರಾಜ್ಯದಲ್ಲಿ ಹೆಚ್ಚುತ್ತಿರುವ ಮರಳು ದಂಧೆ, ಬಡ್ಡಿ ವ್ಯವಹಾರ, ಭೂ ಹಗರಣ, ಭೂ ಮಾಫಿಯಾ ಈ ರೀತಿಯ ಯಾವುದೇ ದಂಧೆಯಲ್ಲಿ ಗೃಹ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಶಾಮೀಲಾಗಿದ್ದು ಕಂಡುಬಂದರೆ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೇ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಲಾಗುವುದು. ಆದ್ದರಿಂದ,  ಇಂತಹ ಅಕ್ರಮ ದಂಧೆಗಳಲ್ಲಿ ತೊಡಗಿರುವವರಿಂದ ದೂರ ಉಳಿಯಿರಿ  ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಆಧುನೀಕ ಯುಗದಲ್ಲಿ ಪೊಲೀಸರು ಯಾವುದೇ ರೀತಿಯ ಸಮಾಜಘಾತಕ ಕಾರ್ಯಚಟುವಟಿಕೆಗಳ ವಿರುದ್ಧ ಕಾರ್ಯಚರಣೆಗೆ ತೆರಳುವಾಗ  ವ್ಯವಸ್ಥಿತವಾದ ಯೋಜನೆ ರೂಪಿಸಿ ಮುಂಜಾಗ್ರತಾ ವಹಿಸುವುದು ಅತ್ಯವಶ್ಯಕ    ಎಂದು ಅಭಿಪ್ರಾಯಪಟ್ಟರು. ಇಲ್ಲವಾದಲ್ಲಿ ನಿಮಗೇ ತೊಂದರೆಯಾಗುವುದಲ್ಲದೇ, ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದರು.

ರೈತರ ಧರಣಿ ಸಂದರ್ಭದಲ್ಲಿ ಪೊಲೀಸರು ಬುದ್ಧಿವಂತಿಕೆಯಿಂದ ಧರಣಿ ನಿರತ ರೈತರನ್ನು ಶಾಂತಿಯುತವಾಗಿ ಧರಣಿ ನಡೆಸುವಂತೆಮನವೊಲಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನಲ್ಲಿ ಶೇ,  40 ರಷ್ಟು ಜನಸಂಖ್ಯೆ ಬೇರೆ ರಾಜ್ಯಗಳಿಂದ ವಲಸೆ ಬಂದು ಜೀವನ ನಡೆಸುತ್ತಿದ್ದಾರೆ. ಇವರುಗಳ ರಕ್ಷಣೆ ಮತ್ತು ಇವರ ಕಾರ್ಯಚಟುವಟಿಕೆಗಳ ಮಾಹಿತಿ  ಸಂಗ್ರಹಿಸುವುದು ಬಹಳ ಮುಖ್ಯ ಎಂದರು.  

ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಗೆ ಈ ಬಾರಿ ಹೆಚ್ಚಿನ ಅನುದಾನವನ್ನು ಒದಗಿಸಿದೆ. ಸಮವಸ್ತ್ರ ಹೊಲಿಗೆ ವೆಚ್ಚವನ್ನು 150 ರೂ  ನಿಂದ 500 ರೂ. ಗಳ ವರೆಗೆ ಹೆಚ್ಚಿಸಿದೆ.  ಆಹಾರ ಭತ್ಯೆ ರೂ 60 ರಿಂದ 100 ರೂ. ಗೆ ಹೆಚ್ಚಿಸಿದೆ, ಆರೋಗ್ಯ ತಪಾಸಣೆಗೆ ವಾರ್ಷಿಕ 1000 ರೂ. ಹೆಚ್ಚಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ತಿಳಿಸಿದರು.

ಕರ್ತವ್ಯದ ವೇಳೆ ಮೃತಪಟ್ಟ ಪೊಲೀಸ್ ಅಧಿಕಾರಿಗಳಿಗೆ ನೀಡುವ ಪರಿಹಾರದ ಮೊತ್ತವನ್ನು ರೂ  5 ಲಕ್ಷದಿಂದ 30 ಲಕ್ಷದವರಗೆ ಹೆಚ್ಚಿಸಲಾಗಿದೆ  ಹಾಗೂ ವಿಮಾ ಮೊತ್ತದ ಹಣವನ್ನು 5 ಲಕ್ಷದಿಂದ 20 ಲಕ್ಷದವರೆಗೆ ಹೆಚ್ಚಿಸಿದೆ.   ರಾಜ್ಯದಲ್ಲಿ ಹೊಸ 30 ಮಹಿಳಾ ಪೊಲೀಸ್ ಠಾಣೆಗಳನ್ನು ಹಾಗೂ 5 ಪೊಲೀಸ್ ತರಬೇತಿ ಶಾಲೆಯನ್ನು ತೆರೆಯಲು ಸಹ ಮಂಜೂರಾತಿ ನೀಡಲಾಗಿದೆ ಎಂದರು.

ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಪಟ್ನಾಯಕ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಪೊಲೀಸ್ ಇಲಾಖೆ ಹಿರಿಯ  ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Desk

Recent Posts

ಲೋಕಸಭಾ ಚುನಾವಣೆ ಪ್ರಚಾರ: ಪವನ್​ ಸಿಂಗ್​ ಕಾರಿನ ಗ್ಲಾಸ್​ ಪುಡಿ ಪುಡಿ

2024ರ ಲೋಕಸಭಾ ಚುನಾವಣೆಗೆ ಭೋಜ್​ಪುರಿ ಸೂಪರ್​ಸ್ಟಾರ್ ​ಪವನ್​ ಸಿಂಗ್​ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಹಾರದ ಕರಕಟ್​ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ.…

11 mins ago

ಮಾನಸಿಕ ಅಸ್ವಸ್ಥ ಬಾಲಕಿಯನ್ನೂ ಬಿಡದ ಕಾಮುಕನಿಗೆ 106 ವರ್ಷ ಜೈಲು ಶಿಕ್ಷೆ !

 15 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಗರ್ಭ ಧರಿಸುವಂತೆ ಮಾಡಿದ ವ್ಯಕ್ತಿಗೆ ಕೇರಳ ನ್ಯಾಯಾಲಯವು…

12 mins ago

ರಾಜ್ಯದಲ್ಲಿ ನಾಲ್ಕು ದಿನ ಉಷ್ಣ ಅಲೆ; ಹವಾಮಾನ ಇಲಾಖೆ ಎಚ್ಚರಿಕೆ

ರಾಜ್ಯದಲ್ಲಿ ಮತ್ತೆ ತಾಪಮಾನ ಹೆಚ್ಚಳವಾಗುತ್ತಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಉಷ್ಣ ಅಲೆ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ…

26 mins ago

ಸ್ವಾತಂತ್ರ್ಯ ಹೋರಾಟ, ತ್ರಿವರ್ಣ ಧ್ವಜವನ್ನೇ ಬಿಜೆಪಿ ಒಪ್ಪಿಲ್ಲ: ಬಿ.ಕೆ.ಹರಿಪ್ರಸಾದ್‌

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಈ ದೇಶದ ಸ್ವಾತಂತ್ರ್ಯ ಹೋರಾಟ, ತ್ರಿವರ್ಣ ಧ್ವಜವನ್ನೇ ಒಪ್ಪಿಕೊಂಡಿಲ್ಲ. ಧ್ವಜದಲ್ಲಿರುವ ಮೂರು ಬಣ್ಣಗಳು…

33 mins ago

ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ

ಭಾರತ ಕ್ರಿಕೆಟ್ ತಂಡದ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮ ಇಂದು ತಮ್ಮ 37ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ರೋಹಿತ್ ಶರ್ಮಾ…

57 mins ago

ಜಾರ್ಖಂಡ್‌ನಲ್ಲಿ ಬಿಸಿಗಾಳಿ ಹಿನ್ನೆಲೆ 8ನೇ ತರಗತಿವರೆಗೆ ರಜೆ ಘೋಷಣೆ

ತೀವ್ರವಾದ ಬಿಸಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಜಾರ್ಖಂಡ್‌ನಲ್ಲಿ ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 8 ತರಗತಿವರೆಗೆ ರಜೆ…

1 hour ago