ಬಾಯಿ ಸಿಹಿಗಾಗಿ ಸಿಂಪಲ್ ಲಾಡು

ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದರು ದಾಸರು. ಹಸಿದಾಗ ಏನಾದರೂ ತಿನ್ನಲೇ ಬೇಕು. ಕೆಲವರು ತಿನ್ನಲಿಕ್ಕಾಗಿಯೇ ಬದುಕುತ್ತಾರೆ. ಮತ್ತೆ ಕೆಲವರು ಬದುಕಬೇಕಲ್ಲಾ ಎಂದು ತಿನ್ನುತ್ತಾರೆ. ರುಚಿಯಾದ ತಿಂಡಿ -ತಿನಿಸು ನಾಲಿಗೆಗೆ ಹಾಗೂ ಮನಕ್ಕೆ ಮುದ ನೀಡುತ್ತದೆ. ಬನ್ನಿ ನಾವು ಈಗ ಸಿಂಪಲ್ ಸಿಹಿ ಲಾಡು ಮಾಡಿ ಸವಿಯೋಣ.

ಲಾಡು ಮಾಡೋದು ತುಂಬಾನೇ ಸುಲಭ.. ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದೊರಕುವ ಪ್ರಸಾದ ಲಾಡು. ನಂಜನಗೂಡು, ಶ್ರೀರಂಗಪಟ್ಟಣದಲ್ಲೂ ಈಗ ಲಡ್ಡು ಪ್ರಸಾದ ಲಭ್ಯ. ಮದುವೆ, ಮುಂಜಿಯ ಮನೆಯಲ್ಲೂ ಸಾಮಾನ್ಯವಾಗಿ ಲಾಡು ಕಾಣಬರುತ್ತದೆ. ಲಾಡು ಸುಲಭವಾದ ಸಿಹಿ.

ಬೇಕಾಗುವ ಪದಾರ್ಥ :ಒಂದು ಕೆಜಿಯಷ್ಟು ಸಕ್ಕರೆ, ಕಾಲು ಲೀಟರ್ ಹಾಲು, ಹತ್ತು ಹನ್ನೆರಡು ಏಲಕ್ಕಿ, ಕೇಸರಿ ದಳ, ಒಂದು ಗಿಟಕು ಕೊಬ್ಬರಿ, ದ್ರಾಕ್ಷಿ, ಗೋಡಂಬಿ ೨೫೦ ಗ್ರಾಂನಷ್ಟು ಜೊತೆಗೆ ಇಪ್ಪತ್ತೈದು ಲವಂಗ.

ಲಡ್ಡು ಮಾಡುವ ವಿಧಾನ : ಮೊದಲು ಶುದ್ಧವಾದ ಕಡಲೆಹಿಟ್ಟುನ್ನು ವಂದರಿಯಲ್ಲಿ ವಂದರಾಡಿಕೊಂಡು ನೀರು ಹಾಕಿ ಇಡ್ಲಿ ಹಿಟ್ಟಿನ ಹಾಗೆ ಕಲಸಿಡಬೇಕು. ಆನಂತರ ದೊಡ್ಡ ಬಾಣಲೆಯನ್ನು ಒಲೆಯ ಮೇಲೆಟ್ಟು ತುಪ್ಪ ಅಥವಾ ರೀಫೈನ್ಡ್ ಆಯಿಲ್ ಹಾಕಬೇಕು. ಎಣ್ಣೆ ಅಥವಾ ತುಪ್ಪ ಕಾದ ಮೇಲೆ ಜಾಲರಿಯನ್ನು ಬಾಣಲೆಯ ಮೇಲಿಟ್ಟು ಹಿಟ್ಟು ಹಾಕಿ, ಒಂದೆರಡು ಬಾರಿ ಜಾಲಾರಿಯನ್ನು ಮೇಲೆ ಕೆಳಗೆ ಅಲುಗಾಡಿಸಿದರೆ, ಸಣ್ಣಸಣ್ಣ ಗೋಲಾಕಾರದ ಹಿಟ್ಟು ಕಾದ ಎಣ್ಣೆಯಲ್ಲಿ ಬಿದ್ದು ಬೂಂದೀ ಅಥವಾ ಲಾಡು ಕಾಳಾಗಿ ಪರಿವರ್ತನೆಯಾಗುತ್ತದೆ.

ಚೆನ್ನಾಗಿ ಕರಿದ ಕಾಳುಗಳನ್ನು ಜಾಲರಿಯಲ್ಲಿ ಎಣ್ಣೆ ಸೋಸಿ ತೆಗೆದು ಬುಟ್ಟಿ ಅಥವಾ ರಂಧ್ರವಿರುವ ಪಾತ್ರೆಗೆ ಹಾಕಿಕೊಳ್ಳಿ. ಕಾಳು ಸಿದ್ಧವಾದ ಬಳಿಕ. ಹಾಲು ಮತ್ತು ಸಕ್ಕರೆ ಹಾಕಿ ಸಕ್ಕರೆ ಪಾಕದ ಮಿಶ್ರಣ ಮಾಡಿಕೊಳ್ಳಿ ಏಲಕ್ಕಿ ಪುಡಿ, ಕೇಸರಿದಳವನ್ನೂ ಪಾಕದೊಡನೆ ಸೇರಿಸಿ. ಇದಾದ ಬಳಿಕ ಲಾಡು ಕಾಳುಗಳನ್ನು ಹಾಗೂ ಸ್ವಲ್ಪ ಸ್ವಲ್ಪ ಪಾಕ ಸೇರಿಸಿ ನಿಮ್ಮ ಅನುಕೂಲಕ್ಕೆ ತಕ್ಕ ಗಾತ್ರದ ಉಂಡೆ ಕಟ್ಟಿ ಲಾಡು ಉಂಡೆಗಳ ಮೇಲೆ ದ್ರಾಕ್ಷಿ, ಗೋಡಂಬಿ, ಸಣ್ಣಗೆ ಹೆಚ್ಚಿದ ಕೊಬ್ಬರಿ ಚೂರು ಮತ್ತು ಲವಂಗ ಹಾಕಿದರೆ ಸಿಹಿಯೂ ಸವಿಯೂ ಆದ ಲಾಡು ರೆಡಿ.

Desk

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

47 mins ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

1 hour ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

1 hour ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

2 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

2 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

2 hours ago