Categories: ಬೀದರ್

ಸ್ವಾತಂತ್ರ್ಯ ಹೋರಾಟ, ತ್ರಿವರ್ಣ ಧ್ವಜವನ್ನೇ ಬಿಜೆಪಿ ಒಪ್ಪಿಲ್ಲ: ಬಿ.ಕೆ.ಹರಿಪ್ರಸಾದ್‌

ಬೀದರ್ : ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಈ ದೇಶದ ಸ್ವಾತಂತ್ರ್ಯ ಹೋರಾಟ, ತ್ರಿವರ್ಣ ಧ್ವಜವನ್ನೇ ಒಪ್ಪಿಕೊಂಡಿಲ್ಲ. ಧ್ವಜದಲ್ಲಿರುವ ಮೂರು ಬಣ್ಣಗಳು ಅಶುಭ ಎಂದು ಒಪ್ಪಿಲ್ಲ. ಇನ್ನು ಸಂವಿಧಾನವೆಲ್ಲಿ ಒಪ್ಪುತ್ತಾರೆ. ಈಗ ಚುನಾವಣೆ ಸಂದರ್ಭ ಇರುವುದರಿಂದ ಸಂವಿಧಾನ ಪರ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿದರು.

ಸಂವಿಧಾನ ಬದಲಿಸುವುದು ಬಿಜೆಪಿಯ ಗುಪ್ತ ಕಾರ್ಯಸೂಚಿ. ರಾಜಸ್ತಾನದಲ್ಲಿ ಅವರ ಪಕ್ಷದ ಸಂಸದರೇ ಅದರ ಬಗ್ಗೆ ಹೇಳಿದ್ದಾರೆ. ಚುನಾವಣೆಯಲ್ಲಿ 400 ಸೀಟು ಗೆದ್ದರೆ ಸಂವಿಧಾನ ಬದಲಿಸುತ್ತೇವೆ ಅಂದಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು 2015ರಲ್ಲಿ ಮೀಸಲಾತಿ ಹೋಗಬೇಕೆಂದು ಹೇಳಿದ್ದರು. ಆದರೆ, ಬಿಹಾರದ ಚುನಾವಣೆಯಲ್ಲಿ ಪಾಠ ಕಲಿತು ಈಗ ತಿದ್ದಿಕೊಂಡಿರುವುದು ಬಹಳ ಸಂತೋಷ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವೀರ ಸಾವರ್ಕರ್‌, ಗೋಳ್ವಾಳ್ಕರ್‌ ಅವರು ಸಂವಿಧಾನದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಕಾಣಿಸುತ್ತಿದೆ ಎಂದಿದ್ದಾರೆ. ಸಂವಿಧಾನದ ಬಗೆಗಿನ ಅವರ ಮನಃಸ್ಥಿತಿ ತೋರಿಸುತ್ತದೆ. ದೇಶದಲ್ಲಿ ತಾಲಿಬಾನ್‌ ಸರ್ಕಾರ ಇಲ್ಲ. ಅಫ್ಘಾನಿಸ್ತಾನ ಸುಧಾರಣೆ ಆಗುತ್ತಿದೆ. ಈ ಬಿಜೆಪಿಯವರು ಯಾವಾಗ ಸುಧಾರಣೆ ಆಗುತ್ತಾರೋ ಗೊತ್ತಿಲ್ಲ’ ಎಂದು ಟೀಕಿಸಿದರು.

ಮೋದಿಯವರು ತನ್ನನ್ನು ಯಾವಾಗಲೂ ವಿಶ್ವಗುರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಮೀನು, ಮುಸಲ್ಮಾನ, ಪಾಕಿಸ್ತಾನ ಇದನ್ನು ಮಾತಾಡುತ್ತಿದ್ಧಾರೆ. 140 ಕೋಟಿ ಜನ ಧರ್ಮ, ಜಾತಿ, ಭಾಷೆ ಬೇರೆ ಬೇರೆಯಿದ್ದರೂ ಎಲ್ಲರೂ ಸಮಾನರು. ಸೌಹಾರ್ದತೆಯಿಂದ ಎಲ್ಲರೂ ಬದುಕುತ್ತಿದ್ದಾರೆ. ಹಿಂದಿನ ಹತ್ತು ವರ್ಷಗಳಲ್ಲಿ ಏನು ಮಾಡಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಏನು ಮಾಡುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಲ್ಲ. ಇವರ ಅಮೃತಕಾಲಕ್ಕಾಗಿ ಯುವಕರು 23 ವರ್ಷ ಕಾಯಬೇಕಾ? ಎಂದು ಪ್ರಶ್ನಿಸಿದರು.

2014ರಲ್ಲಿ ಅಚ್ಛೆ ದಿನ್‌, ಕೌಶಲ ಭಾರತ, ಮೇಕ್‌ ಇನ್‌ ಇಂಡಿಯಾ ಅಂತ ಹೇಳಿದ್ರು. ಅದರಿಂದ ಯಾರಿಗೆ ಅನುಕೂಲ ಆಗಿದೆ ಎಂದು ಹೇಳುತ್ತಿಲ್ಲ. ಈ ದೇಶದ ಜನರಿಗೆ ವಿಶ್ವಾಸದ್ರೋಹ ಮಾಡಿರುವುದು ಗೊತ್ತಾಗಿದೆ. ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆ ಮಾಡುತ್ತೇವೆ. ಭ್ರಷ್ಟಾಚಾರ ತೊಲಗಿಸುತ್ತೇನೆ ಎಂದು ಹೇಳಿದ್ದರು. ಆದರೆ, ಭ್ರಷ್ಟಾಚಾರದ ಅಕ್ರಮವನ್ನು ಸಕ್ರಮಗೊಳಿಸಿದ್ದಾರೆ. ಅದು ಚುನಾವಣಾ ಬಾಂಡ್‌ ಮೂಲಕ. ಯಾರು ದೇಣಿಗೆ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದರು.

Chaitra Kulal

Recent Posts

ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮೃತ್ಯು

ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.

10 mins ago

ರಸ್ತೆ ತಿರುವಿನ ಅಪಾಯಕಾರಿ ವಿದ್ಯುತ್ ತಂತಿಗಳು: ಸುರಕ್ಷಿತ ಎತ್ತರಕ್ಕೆ ಏರಿಕೆ

ಸಾಣೂರಿನ ಲೈನ್ ಮ್ಯಾನ್  ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…

24 mins ago

ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ

ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…

43 mins ago

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

58 mins ago

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

1 hour ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

2 hours ago