News Karnataka Kannada
Monday, May 06 2024
ಬೆಂಗಳೂರು ನಗರ

ಗೂಗಲ್ ಮ್ಯಾಪ್‌ನಲ್ಲಿ ಗ್ಯಾನ್‌ವಾಪಿ ಮಸೀದಿಯ ಹೆಸರು ಬದಲಾಯಿಸಲು ಸೂಚನೆ

Gyanvapi
Photo Credit :

ಬೆಂಗಳೂರು: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ವಾರಣಾಸಿಯ ಗ್ಯಾನ್‌ವಾಪಿ ಮಸೀದಿಯ ಬಗ್ಗೆ ಬೆಂಗಳೂರಿನ ಖಾಸಗಿ ಶಾಲೆಯೊಂದು ವಿವಾದಾತ್ಮಕ ಸೂಚನೆ ನೀಡಿದ್ದು, ಗೂಗಲ್ ಮ್ಯಾಪ್‌ನಲ್ಲಿ ಗ್ಯಾನ್‌ವಾಪಿ ಮಸೀದಿಯನ್ನು ಗ್ಯಾನ್‌ವಾಪಿ ದೇವಸ್ಥಾನ ಎಂದು ಬದಲಾಯಿಸುವಂತೆ ತನ್ನ ಹಳೆಯ ವಿದ್ಯಾರ್ಥಿಗಳಿಗೆ ಇ-ಮೇಲ್ ಮಾಡಿದೆ.

ಕೆಲವು ದಿನಗಳ ಹಿಂದೆ ಹಳೆಯ ವಿದ್ಯಾರ್ಥಿಗಳಿಗೆ ಕಳುಹಿಸಲಾದ ಇಮೇಲ್ ನಲ್ಲಿ ಗೂಗಲ್ ಮ್ಯಾಪನ್ ನಲ್ಲಿ ಸ್ಥಳವನ್ನು ಹೇಗೆ ಬದಲಾಯಿಸುವುದು ಎಂಬುದರ ಕುರಿತು ವಿವರವಾದ ಸೂಚನೆಗಳನ್ನು ನೀಡಿದ್ದು, ಅದರಲ್ಲಿ ಗ್ಯಾನ್‌ವಾಪಿ ಮಸೀದಿಯನ್ನು ದೇವಸ್ಥಾನ ಎಂದು ಗುರುತಿಸುವಂತೆ ಸೂಚಿಸಲಾಗಿದೆ.

ಗೂಗಲ್ ಈ ಬದಲಾವಣೆಗಳನ್ನು ಅಪ್ ಡೇಟ್ ಮಾಡುವವರೆಗೆ ನೀವು ಹೀಗೆ ಮಾಡಿ ಮತ್ತು ನಿಮ್ಮ ಹಿಂದೂ ಸಹೋದರ, ಸಹೋದರಿಯರಿಗೆ ಜ್ಞಾನವಾಪಿ ದೇವಸ್ಥಾನ ಎಂದು ಬದಲಾಯಿಸುವಂತೆ ಸೂಚಿಸಬೇಕು ಎಂದು ಇಮೇಲ್ ನಲ್ಲಿ ಬರೆಯಲಾಗಿದೆ. ಇದಕ್ಕೆ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ಬೆಂಗಳೂರಿನ ನ್ಯೂ ಹೊರೈಜನ್ ಪಬ್ಲಿಕ್ ಸ್ಕೂಲ್ ಈ ವಿವಾದಾತ್ಮಕ ಇಮೇಲ್ ಮಾಡಿದ್ದು, ಈಗ ಸರಿಯಾದ ಸ್ಕ್ರೀನಿಂಗ್ ಕಾರ್ಯವಿಧಾನಗಳಿಲ್ಲದೆ ಅದನ್ನು ಕಳುಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

“ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಬಗ್ಗೆ ಕಳುಹಿಸಲಾದ ಇಮೇಲ್‌ನ ವರದಿಗಳು ನಮ್ಮ ಗಮನಕ್ಕೆ ಬಂದಿವೆ ಮತ್ತು ಸಮಸ್ಯೆಯನ್ನು ಹೆಚ್ಚಿನ ಆದ್ಯತೆಯೊಂದಿಗೆ ನಿರ್ವಹಿಸಲಾಗುತ್ತಿದೆ. ಅಗತ್ಯವಿರುವ ಸರಿಯಾದ ಸ್ಕ್ರೀನಿಂಗ್ ಕಾರ್ಯವಿಧಾನಗಳಿಲ್ಲದೆ ಇಮೇಲ್ ಕಳುಹಿಸಲಾಗಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಶಾಲೆ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು