ಬೆಂಗಳೂರು: ರಾಜ್ಯ ಸರ್ಕಾರವು ಒಂದೇ ದಿನ 100 ಇನ್ಸ್ ಪೆಕ್ಟರ್ ಮತ್ತು 18 ಮಂದಿ ಡಿವೈಎಸ್ ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇವರೆಲ್ಲರೂ ನಾಗರಿಕ ಪೊಲೀಸ್ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರು. ವರ್ಗಾವಣೆ ಆಗಿರುವ ಇನ್ಸ್ ಪೆಕ್ಟರ್ ಗಳಲ್ಲಿ 24 ಮಂದಿ ಬೆಂಗಳೂರು ನಗರ ವಲಯಕ್ಕೆ ಸೇರಿದವರು.
ಆಡಳಿತ ಪಕ್ಷದ ನಾಯಕರ ಮನವಿ ಮೇರೆಗೆ ಈ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಪೊಲೀಸ್ ಇಲಾಖೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವರ್ಗಾವಣೆಯು ನಡೆಯುತ್ತದೆ. ಆದರೆ ಈಗ ಇದು ಯಾವಾಗಲೂ ನಡೆಯುತ್ತಲೇ ಇರುವುದು.