ಬೆಂಗಳೂರು : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಶಾಕ್ ನೀಡಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಶುಲ್ಕವನ್ನು 35 ರೂ ಹೆಚ್ಚಳ ಮಾಡಿದೆ.
ಎಸ್ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು 2022 ರ ಫೆಬ್ರವರಿಯಲ್ಲಿ ನಡೆಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ನಡೆಸಿದ್ದು, ಏಕಾಏಕಿ 35 ರೂ. ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದೆ. ಪರೀಕ್ಷೆಗೆ ಪ್ರತಿ ವಿದ್ಯಾರ್ಥಿಯಿಂದ ಪಡೆಯುತ್ತಿದ್ದ 25 ರೂ. ಶುಲ್ಕವನ್ನು 60 ರೂ.ಗಳಿಗೆ ಹೆಚ್ಚಿಸುವ ಮಂಡಳಿ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ.
ಶುಲ್ಕ ವಿನಾಯಿತಿ ಪಡೆಯುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಶುಲ್ಕ ಪಾವತಿಸುವ ಸಾಮಾನ್ಯ ವಿದ್ಯಾರ್ಥಿಗಳಿಂದ ಪೂರ್ವ ಸಿದ್ಧತಾ ಮತ್ತು ಮುಖ್ಯ ಪರೀಕ್ಷಾ ಶುಲ್ಕವನ್ನು ಒಟ್ಟಿಗೆ ಸ್ವೀಕರಿಸಲು ಕ್ರಮ ಕೈಗೊಂಡಿದೆ.