News Karnataka Kannada
Monday, April 29 2024
ಬೆಂಗಳೂರು ನಗರ

ಅಬ್ಬಬ್ಬಾ.! ಡಿಕೆ ಶಿವಕುಮಾರ್ ಆಸ್ತಿ ಇಷ್ಟೊಂದಾ.?

Photo Credit :

ಅಬ್ಬಬ್ಬಾ.! ಡಿಕೆ ಶಿವಕುಮಾರ್ ಆಸ್ತಿ ಇಷ್ಟೊಂದಾ.?

ಬೆಂಗಳೂರು: ಕರ್ನಾಟಕದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರು ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಇದೀಗ ಅವರು ತಮ್ಮ ಆಸ್ತಿ ವಿವರವುಳ್ಳ ಅಫಿಡವಿಟ್ ಸಲ್ಲಿಸಿದ್ದಾರೆ.

ಕಳೆದ 5 ವರ್ಷಗಳಿಂದ ಡಿ.ಕೆ ಶಿವಕುಮಾರ್ ಅವರ ಆಸ್ತಿ ದುಪ್ಪಟ್ಟಾಗಿದೆ. 2013ಕ್ಕೆ ಹೋಲಿಸಿದರೆ ಆಸ್ತಿ ಡಬ್ಬಲ್ ಆಗಿದ್ದು, ಸುಮಾರು 600 ಕೋಟಿ ರೂಫಾಯಿ ಪ್ಲಸ್ ಆಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ 251 ಕೋಟಿ ರೂ.ಆಸ್ತಿ ಘೋಷಿಸಿದ್ದರು.

ಈಗ ಸ್ಥಿರಾಸ್ತಿ 548 ಕೋಟಿ 85 ಲಕ್ಷದ 20 ಸಾವಿರದ 592 ರೂ ಹಾಗೂ ಚರಾಸ್ತಿ 70 ಕೋಟಿ 94 ಲಕ್ಷದ 84 ಸಾವಿರದ 974 ರೂ.ನಷ್ಟಿದೆ. ಜೊತೆಗೆ ಬ್ಯಾಂಕ್ ಸಾಲ 101 ಕೋಟಿ 77 ಲಕ್ಷದ 82 ಸಾವಿರದ 200ರೂ.ನಷ್ಟಿದೆ.

ಕುಟುಂಬದ ಒಟ್ಟು ಆಸ್ತಿ ಮೊತ್ತವನ್ನು ಸೇರಿಸಿದರೆ 840 ಪ್ಲಸ್ ಕೋಟಿ ರೂಪಾಯಿ ಆಸ್ತಿಯ ಒಡೆಯ ಡಿಕೆ ಶಿವಕುಮಾರ್. ಅವರ ಪುತ್ರಿ ಐಶ್ವರ್ಯಾ ಹೆಸರಿನಲ್ಲಿ 102 ಕೋಟಿ ರೂಪಾಯಿ ಆಸ್ತಿ, ಪತ್ನಿ ಉಷಾ ಅವರ ಹೆಸರಿನಲ್ಲಿ 48 ಕೋಟಿ ರೂಪಾಯಿ ಆಸ್ತಿ ಇದೆ.

ಗುರುವಾರ ಕನಕಪುರ ತಾಲೂಕಿನ ಕಬ್ಬಾಳುವಿನಲ್ಲಿರುವ ಕಬ್ಬಾಳಮ್ಮ ದೇವಿಗೆ, ಕನಕಪುರದ ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಿವಕುಮಾರ್ ನಾಮಪತ್ರ ಸಲ್ಲಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
189

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು