News Karnataka Kannada
Sunday, April 21 2024
Cricket
ಬೆಂಗಳೂರು

ತಂಗಿ ಎನ್ನುತ್ತಿದ್ದವ ಪತ್ನಿಯನ್ನೇ ಅಪಹರಿಸಿದ: ಬೆಂಗಳೂರಿನಲ್ಲೊಂದು ಲವ್‌ ಜಿಹಾದ್‌ ಆರೋಪ

Bengaluru: Man who claimed to be his sister kidnapped his wife, alleges 'love jihad' in Bengaluru
Photo Credit : IANS

ಬೆಂಗಳೂರು: ಸ್ನೇಹಿತನೊಬ್ಬ ತನ್ನ ಪತ್ನಿಯನ್ನು ಅಪಹರಿಸಿದ್ದು ಲವ್‌ ಜಿಹಾದ್‌ ನಡೆಸಿದ್ದಾನೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಿದ್ದಾನೆ.

ನಗರದ ಖಾಸಗಿ ಕಾರ್ಖಾನೆಯಲ್ಲಿ ಕಾರ್ಮಿಕನಾಗಿರುವ ಹೊಸಗುಡ್ಡದಹಳ್ಳಿಯ ನಿವಾಸಿ ಅಜಿತ್‌ ಕಳೆದ ಮೂರುರ್ಷಗಳ ಹಿಂದೆ ಮನೆಯವರ ವಿರೋಧದ ನಡುವೆಯೇ 2020ರಲ್ಲಿ ಪ್ರೀತಿಸಿ ವಿವಾಹವಾಗಿದ್ದ. ಅಜಿತ್‌ ಗೆ ತನ್ನ ಫ್ಯಾಮಿಲಿ ಫ್ರೆಂಡ್‌ ಇದೀಗ ದುಷ್ಮನ್‌ ಆಗಿದ್ದು, ಆತನೆ ತನ್ನ ಪತ್ನಿಯನ್ನು ಅಪಹರಿಸಿ ಲವ್‌ ಜಿಹಾದ್‌ ಮಾಡಿದ್ದಾನೆ ಎಂದು ದೂರು ನೀಡಿದ್ದಾನೆ.

ವಿವಾಹವಾದ ಹೊಸತರಲ್ಲಿ ಪತಿ -ಪತ್ನಿ ನಡುವೆ ನಡುವೆ ನಡೆಯುತ್ತಿದ್ದ ಸಣ್ಣ ಪುಟ್ಟ ಜಗಳಗಳನ್ನು ಸಲ್ಮಾನ್‌ ಬಗೆಹರಿಸುತ್ತದೆ. ಈ ಮೂಲಕ ಅಜಿತ್‌ ಹೆಂಡತಿಯ ಮನಗೆದ್ದಿದ್ದ. ಅಲ್ಲದೆ ಪತ್ನಿಯೊಂದಿಗೆ ರಹಸ್ಯ ಸಂಬಂಧ ಬೆಳೆಸಿದ್ದ ಎಂದು ಆರೋಪಿಸಲಾಗಿದೆ. ಈ ನಡುವೆ ಸಲ್ಮಾನ್‌ ಮತ್ತು ಅಜಿತ್‌ ನ ಹೆಂಡತಿ ಖಾಸಗಿಯಾಗಿ ಕಳೆದಿರುವ ಕ್ಷಣಗಳನ್ನು ಅಜಿತ್‌ ಗೆ ಕಳುಹಿಸಿದ್ದು, ಅಜಿತ್‌ ಗೆ ಶಾಕ್‌ ಆಗಿದೆ.

ಸಲ್ಮಾನ್ ಬಾಲ್ಯದಿಂದಲೂ ಅಜಿತ್‌ಗೆ ಪರಿಚಿತರಾಗಿದ್ದರು ಮತ್ತು ಇಬ್ಬರೂ ಸ್ನೇಹಿತರಾಗಿದ್ದರು ಮತ್ತು ಕಾರ್ಖಾನೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.

ಕಳೆದ ಏಪ್ರಿಲ್‌ನಲ್ಲಿ ಅಜಿತ್‌ನ ಹೆಂಡತಿ ತನ್ನ ಪೋಷಕರ ಮನೆಗೆ ಹೋಗಿದ್ದಳು. ಬಳಿಕ ಅಜಿತ್‌ನೊಂದಿಗೆ ಬಳಿಗೆ ಬರಲು ನಿರಾಕರಿಸಿದಳು. ಅಲ್ಲದೆ ನಿನ್ನೊಂದಿಗೆ ಜೀವನ ಮಾಡಲು ಇಷ್ಟವಿಲ್ಲ. ಸಲ್ಮಾನ್‌ ನೊಂದಿಗೆ ಇರಲು ಬಯಸುತ್ತೇನೆ ಎಂದು ಹೇಳಿದ್ದಾಳೆ.

ಲವ್‌ ಜಿಹಾದ್‌ ಆರೋಪ: ಲವ್ ಜಿಹಾದ್ ಗೆ ಪತ್ನಿ ಬಲಿಯಾಗಿದ್ದಾಳೆ ಎಂದು ಅಜಿತ್ ಆರೋಪಿಸಿದ್ದಾರೆ. ಸಲ್ಮಾನ್ ತನ್ನ ಹೆಂಡತಿಯನ್ನು ಮೊದಲು ತನ್ನ ಸಹೋದರಿ ಎಂದು ಕರೆದು ಅವಳಿಗೆ ಹತ್ತಿರವಾದ. ನಂತರ ಅವಳನ್ನು ಬ್ರೈನ್ ವಾಶ್ ಮಾಡಿದರು. ಖಾಸಗಿ ಕ್ಷಣಗಳ ಫೋಟೋಗಳನ್ನು ವೈರಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಜಿತ್‌ ಹೆಂಡತಿ ಪ್ರತಿಕ್ರಿಯೆ: ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಜಿತ್ ಪತ್ನಿ, ತನ್ನ ಪತಿಯ ಮೂಲಕ ಸಲ್ಮಾನ್ ನನಗೆ ಪರಿಚಯವಾಗಿದ್ದು ನಿಜ. ಸಲ್ಮಾನ್‌ ನನ್ನ ಮಾನಸಿಕ ನೆಮ್ಮದಿಗೆ ಕಾರಣವಾಗಿದ್ದಾರೆ ಎಂದು ಹೇಳಿದ್ದಾಳೆ. ಅಲ್ಲದೆ ಸಲ್ಮಾನ್‌ ಕೂಡ ಈ ಕುರಿತು ಮಾತನಾಡಿದ್ದು, ನನ್ನ ಸ್ನೇಹಿತನ ಹೆಂಡತಿಯ ಬ್ರೈನ್ ವಾಶ್ ಮಾಡುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಲವ್ ಜಿಹಾದ್ ಎಂಬುದೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಿಂದು ಕಾರ್ಯಕರ್ತರ ಹೋರಾಟ: ಘಟನೆ ಮಾಹಿತಿ ಪಡೆದ ಹಿಂದೂ ಕಾರ್ಯಕರ್ತರು ಅಜಿತ್‌ ಪತ್ನಿಯನ್ನು ಪತಿ ಬಳಿಗೆ ಮರಳುವಂತೆ ಮನವಿ ಮಾಡಿದ್ದಾರೆ. ಆಕೆ ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ ಮತ್ತು ಭವಿಷ್ಯದಲ್ಲಿ ತನ್ನ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುವುದಾಗಿ ಎಚ್ಚರಿಸಿದ್ದಾರೆ. ಈ ಸಂಬಂಧ ಪೊಲೀಸರು ಇನ್ನೂ ದೂರು ಸ್ವೀಕರಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು