ಬೆಂಗಳೂರು: ಅಮೆಜಾನ್ ಇಂಡಿಯಾ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್ ನ ಮೊದಲ ಮೊದಲ 48 ಗಂಟೆಗಳಲ್ಲಿ ದಾಖಲೆಯ 9.5 ಕೋಟಿ ಗ್ರಾಹಕರು ಭೇಟಿ ಅಮೆಜಾನ್ ಜಾಲತಾಣಕ್ಕೆ ಭೇಟಿ ನೀಡಿದ್ದಾರೆ ಎಂದು ಕಂಪನಿ ಹೇಳಿದೆ.
ಅಕ್ಟೋಬರ್ 7 ರಂದು ಪ್ರಾರಂಭವಾದ ಅಮೆಜಾನ್ ಫೆಸ್ಟಿವಲ್ ನ ಪ್ರೈಮ್ ಅರ್ಲಿ ಆಕ್ಸೆಸ್ (PEA) ನಲ್ಲಿ ಸಾಮಾನ್ಯ ದಿನಗಳಿಗಿಂತ ಪ್ರೈಮ್ ಸದಸ್ಯರ ಶಾಪಿಂಗ್ 18 ಪಟ್ಟು ಹೆಚ್ಚಾಗಿದೆ. ಪ್ರೈಮ್ ಅರ್ಲಿ ಆಕ್ಸೆಸ್ ಸಮಯದಲ್ಲಿ ಮಾರಾಟದ ಮೊದಲ ಗಂಟೆಯಲ್ಲಿ ಪ್ರೈಮ್ ಸದಸ್ಯರು ಸೆಕೆಂಡಿಗೆ 75 ಕ್ಕೂ ಹೆಚ್ಚು ಸ್ಮಾರ್ಟ್ಫೋನ್ಗಳನ್ನು ಖರೀದಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.
ಮೊದಲ 48 ಗಂಟೆಗಳಲ್ಲಿ ಮಾರಾಟವಾದ ಪ್ರತಿ 5 ಸ್ಮಾರ್ಟ್ಫೋನ್ಗಳಲ್ಲಿ ನಾಲ್ಕು 5G ಫೋನ್ ಆಗಿತ್ತು ಎಂದು ಕಂಪನಿ ವಿವರ ನೀಡಿದೆ. ನಮ್ಮ ಗ್ರಾಹಕರ ವಹಿವಾಟು ವಿವರ ಹಂಚಿಕೊಳ್ಳಲು ನಾನು ರೋಮಾಂಚನಗೊಂಡಿದ್ದೇನೆ ಎಂದು ಅಮೆಜಾನ್ ಇಂಡಿಯಾ ವ್ಯವಸ್ಥಾಪಕ ಮನೀಶ್ ತಿವಾರಿ ಹೇಳಿದ್ದಾರೆ.
ಅಮೆಜಾನ್ ಪೇ ಯುಪಿಐ ಸೈನ್-ಅಪ್ಗಳು ಪ್ರಾರಂಭವಾದಾಗಿನಿಂದ ವರ್ಷ 37 ಪ್ರತಿಶತದಷ್ಟು ಬೆಳೆದಿದೆ. ಪ್ರೈಮ್ ಅರ್ಲಿ ಆಕ್ಸೆಸ್ ಸಮಯದಲ್ಲಿ ಗ್ರಾಹಕರು ಮೊದಲ 48 ಗಂಟೆಗಳಲ್ಲಿ ಪ್ರತಿ ನಿಮಿಷಕ್ಕೆ 100 ಕ್ಕೂ ಹೆಚ್ಚು OnePlus ಸ್ಮಾರ್ಟ್ಫೋನ್ಗಳನ್ನು ಖರೀದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.