News Karnataka Kannada
Sunday, May 12 2024
ಬೆಂಗಳೂರು

ಅನ್ನ ನೀರು ಬಿಟ್ಟು ಕಣ್ಣೀರು ಹಾಕಿದ ನಟಿ ಲೀಲಾವತಿ ಅವರ ಪ್ರೀತಿಯ ಶ್ವಾನ

New Project (59)
Photo Credit : News Kannada

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಶುಕ್ರವಾರ ನಿಧನರಾಗಿದ್ದಾರೆ. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಹಿರಿಯ ನಟಿ ಲೀಲಾವತಿ ಅಮ್ಮನನ್ನು ಕಳೆದುಕೊಂಡ ಅವರ ಪ್ರೀತಿಯ ಶ್ವಾನ ‘ಕರಿಯ’ ಕಣ್ಣೀರನ್ನು ಹಾಕುತ್ತಿದೆ. ಮನೆಯ ಒಳಭಾಗಲ್ಲಿ ಇಟ್ಟಿರುವ ಲೀಲಾವತಿಯವರ ಪೋಟೊ ಮುಂದೆ ಕರಿಯ ವೇದನೆ ಅನುಭವಿಸುತ್ತಿರುವ ಫೋಟೊ ಇದೀಗ ವೈರಲ್‌ ಆಗಿತ್ತು. ಇದೀಗ ರಾತ್ರಿಯಿಂದಲೇ ಮನೆಯಲ್ಲಿ ಅಮ್ಮ ಇಲ್ಲದಿರುವುದನ್ನು ಕಂಡು ಲೀಲಾವತಿಯವರು ಫೋಟೊ ಮುಂದೆ ಸುಮ್ಮನೆ ಕುಳಿತಿದ್ದ ಕರಿಯ ಇದೀಗ ಅಮ್ಮನ ಅಂತಿಮ ದರ್ಶನ ಪಡೆದಿದೆ.

ಕರಿಯ ಅನೇಕ ವರ್ಷಗಳಿಂದ ಲೀಲಾವತಿಯವರ ಅಚ್ಚುಮೆಚ್ಚಿನ ಶ್ವಾನ. ಎರಡು ಕಾಲುಗಳಲ್ಲಿ ಬಹುತೇಕ ಸ್ವಾಧೀನ ಕಳೆದುಕೊಂಡಿದ್ದರೂ ಲೀಲಾವತಿಯವರ ಫೋಟೊ ಮುಂದೆ ಕರಿಯ ರಾತ್ರಿಯೇ ಆಹಾರ ಬಿಟ್ಟು ಕುಳಿತಿತ್ತು. ಈ ದೃಶ್ಯ ಲೀಲಾವತಿ ಅವರ ಅಭಿಮಾನಿಗಳಿಗೂ ಕಣ್ಣೀರು ತರಿಸಿತ್ತು. ಇದೀಗ ಶ್ವಾನ ಅಮ್ಮನ ಅಂತಿಮ ದರ್ಶನ ಪಡೆದಿದೆ. ಈ ವೇಳೆ ವಿನೋದ್‌ ರಾಜ್‌ ಅವರು ಕಣ್ಣೀರಿಟ್ಟರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು